ದಲಿತ ಮೀಸಲಾತಿ: ಬಸವ ವೃತ್ತ, ವಿವಿಧ ಗ್ರಾಮಗಳಲ್ಲಿ ಸಂಭ್ರಮಾಚರಣೆ

ಮಾನ್ವಿ,ಮಾ.೨೫- ಪಟ್ಟಣದ ಬಸವ ವೃತ್ತದಲ್ಲಿ ದಲಿತ ಹಾಗೂ ಮಾದಿಗ ಸಮುದಾಯದ ವಿವಿಧ ಸಂಘಟನೆಯ ಮುಖಂಡರ ಭಾಗವಹಿಸಿ ಈಗೀಗ ಸರ್ಕಾರ ಸದಾಶಿವಾ ಆಯೋಗದ ವರದಿಯಂತೆ ಮಾದಿಗರಿಗೆ ೬% ಚಲುವಾದಿಗೆ ೫.೫% ಬೋವಿ, ಲಂಬಾಣಿಯರಿಗೆ ೪.೫ % ಇತರೆ ದಲಿತರಿಗೆ ೧% ಮೀಸಲಾತಿಯ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮಾನವಿ ಪಟ್ಟಣ ಬಸವ ವೃತ್ತ ಹಾಗೂ ಪೋತ್ನಾಳ್, ನೀರಮಾನವಿ, ಸಿರವಾರ, ಮದ್ಲಾಪೂರ, ಕಲ್ಲೂರು, ಕಪಗಲ್, ಬಾಗಲವಾಡ, ಬಲ್ಲಟಿಗಿ, ಕೊಟ್ನೇಕಲ್, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೀಸಲಾತಿಯ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾನವಿ ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.