ದಲಿತ ಬಾಲಕನ ಮೇಲೆ ಹಲ್ಲೆ ಖಂಡನೀಯ

ಸೇಡಂ, ಸ,23 : ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದ ಗ್ರಾಮದೇವತೆಯ ಭೂತಮ್ಮನ ಮೆರವಣಿಗೆಯ ಸಂದರ್ಭದಲ್ಲಿ ದೇವತೆಯ ಗುಜ್ಜುಕೋಲನ್ನು ಓರ್ವ ದಲಿತ ಬಾಲಕನೋಬ್ಬ ಮುಟ್ಟಿದ ಎಂಬ ಕಾರಣಕ್ಕೆ ದೇವರಿಗೆ ಮೈಲಿಗೆಯಾಗಿದೆ ಎಂದು ಊರಿನ ಪ್ರಬಲ ಸಮುದಾಯಕ್ಕೆ ಸೇರಿದ ಕೆಲವರು ದಲಿತ ಬಾಲಕನಿಗೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ ಎಂದು ಯುವ ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಅವರು ಖಂಡಿಸಿದ್ದಾರೆ.ಅಲ್ಲದೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆ ಅಥವಾ ದಂಡ ಕಟ್ಟದಿದ್ದರೆ ಊರಿನಿಂದ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡಿರುವುದು ಮತ್ತು ಜೀವ ಬೇದರಿಕೆ ಹಾಕಿರುವುದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತ ವಿದ್ಯಮಾನ,ಸಮಾಜದಲ್ಲಿ ಹೆಪ್ಪುಗಟ್ಟಿರುವ ಜಾತೀಯ ಮನೋಭಾವ ಮತ್ತು ಅದರ ಪರಿಣಾಮವಾದ ಕ್ರೌರ್ಯದ ಅಭಿವ್ಯಕ್ತಿಯಂತಿರುವ ಈ ಪ್ರಕರಣವು ಸಮ ಸಮಾಜಕ್ಕಾಗಿ ಹಂಬಲಿಸುವವರನ್ನು ಕಳವಳಕ್ಕೆ ದೂಡುವಂತಹದ್ದು. ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೋಲನೆಯಾಗುತ್ತೀಲ್ಲಾ ದಲಿತರ ಮೇಲೆ ಇನ್ನೂಷ್ಟು ದಬ್ಬಾಳಿಕೆ ದೌರ್ಜನ್ಯ ಹೆಚ್ಚಳವಾಗುತ್ತೀರುವುದು ಕಳವಳಕಾರಿಯಾಗಿದೆ.ಈ ಪ್ರಕರಣಕ್ಕೆ ಸಂಭಂದಿಸಿದಂತೆ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಸಂತೋಷ ಜಾಬೀನ್ ಒತ್ತಾಯಿಸಿದ್ದಾರೆ.