ದಲಿತ ಬಾಲಕನ ದೇಗುಲ ಪ್ರವೇಶ : 25 ಸಾವಿರ ದಂಡ

ಬೆಂಗಳೂರು, ಸೆ.22- ಎರಡು ವರ್ಷದ ಬಾಲಕನ ದೇವಾಲಯಕ್ಕೆ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ .25000 ರೂ ದಂಡ ವಿಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ‌.

ಜೊತೆಗೆ ದೇವಾಲಯವನ್ನು ಸ್ವಚ್ಚಗೊಳಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಮಿಯಾಪುರದಲ್ಲಿ ನಡೆದಿದೆ.

ಬಾಲಕ ದೇವಾಲಯ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅದ ಶುದ್ಧೀಕರಣ ಬೇಕಾಗುವ ಹಣವನ್ನು ದಲಿತ ಕುಟುಂಬವೇ ಬರಿಸಬೇಕು ಎಂದು ಸವರ್ಣೀಯರು ಪಟ್ಟಿ ಹಿಡಿದ್ದಾರೆ. ಈ ವಿಷಯ ಜಿ್ಳಾಲ್ಲಾಡಳಿತದ ಗಮನಕ್ಕೆ ಬರುತ್ತಿದ್ದಂತೆ ಮದ್ಯ ಪ್ರವೇಶ ಮಾಡಿದ ಜಿ್ಳಾಲ್ಲಾಡಳಿತ ಈ ರೀತಿ ಮಾಡಲು ಮುಂದಾದವರಿಗೆ ಎಚ್ಚರಿಕೆ ನೀಡಿದೆ.

ಬಾಲಕನ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್‌ 4 ರಂದು ತಂದೆ ತಾಯಿ ಮಗುವನ್ನು ದೇವಾಲಯಕ್ಕೆ ಕರೆದೊಯ್ಯೊದ್ದಿದ್ದರು.ತಂದೆ ಪ್ರಾರ್ಥನೆ ಸಲ್ಲಿಸವ ವೇಳೆ ಮಗು ದೇವಾಲಯದ ಒಳಕ್ಕೆ ಪ್ರವೇಶ ಮಾಡಿತ್ತು.

ದೇವಾಲಯದ ಅರ್ಚಕರು ಮತ್ತು ಸ್ಥಳೀಯರು ಬಾಲಕನ ಕುಟುಂಬದ ಸದಸ್ಯರಿಗೆ ಶುದ್ದೀಕರಣಕ್ಕಾಗಿ 25 ಸಾವಿರ ರೂಪಾಯಿ ದಂಡ ವಿಧಿಸಿ ಸೆಪ್ಟೆಂಬರ್ 11 ರಂದು ಸೂಚಿಸಿದ್ದರು.

ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ ಮಗನ ಹುಟ್ಟುಹಬ್ಬದ ಇದ್ದ ಹಿನ್ನೆಲೆಯಲ್ಲಿ ವಿಯಾಪುರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ್ದವು.ನಾವು ಪೂಜೆ ಸಲ್ಲಿಸುವ ವೇಳೆ ಮಗ ದೇವಾಲಯ ಪ್ರವೇಶ ಮಾಡಿದ್ದ ಹೀಗಾಗಿ ದಂಡ ವಿಧಿಸಲಾಗಿತ್ತು ಎಂದು ಬಾಲಕನ ತಂದೆ ಚಂದ್ರು ಹೇಳಿದ್ದಾರೆ.

ಚನ್ನ ದಾಸರ ಸಮುದಾಯ ಈ ಘಟನೆಯ ‌ಬಳಿಕ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಘಟನೆ ಪೊಲೀಸ್ ಠಾಣೆಯ ಮೇಟ್ಟಿಲೇರಿದೆ.