ದಲಿತ ಪ್ಯಾಂಥರ್ ಮುಖಂಡ ಉತ್ತರೇಶ್ ಗೌಡ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜ 7, ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ  ಮಾಜಿ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಉತ್ತರೇಶಗೌಡ (48)ನಿನ್ನೆ ನಿಧನರಾಗಿಧದಾರೆ,  ಬಳ್ಳಾರಿ ತಾಲೂಕಿನ ವೇಣಿ ವೀರಾಪುರ ಗ್ರಾಮದ ನಿವಾಸಿಯಾಗಿದ್ದು ಗ್ರಾಮ ಘಟಕದ ಕಾರ್ಯಕರ್ತ ಸ್ಥಾನದಿಂದ ಹಂತ ಹಂತವಾಗಿ ಸಂಘಟನೆ ಬಲಪಡಿಸುವುದರೊಂದಿಗೆ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ, ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಯಾಗಿ  ಜಿಲ್ಲೆಯಲ್ಲಿ ದಲಿತ ಪರ ಕನ್ನಡ ಪರ, ಜಿಲ್ಲೆಯಲ್ಲಿನ ಫ್ಯಾಕ್ಟರಿಗಳ ಅಕ್ರಮಗಳ ಬಗ್ಗೆ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಿ ಉಗ್ರ ಹೋರಾಟಗಳನ್ನ ನಡೆಸಿಕೊಂಡು ಬಂದು ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸೋಮ ನವ ಜ್ಯೋತಿ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿ ಶಾಲೆ ನಡೆಸುತ್ತಿದ್ದರು. ಹೊಟೆಲ್ ಉದ್ಯಮಿಯಾಗಿದ್ದ ಅವರು. ಪತ್ನಿ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅವರ ಸ್ವಗ್ರಾಮ ವೇಣಿವೀರಾಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.