ದಲಿತ ಜನ ಜಾಗೃತಿ ವೇದಿಕೆ ಕಾರ್ಯಕರ್ತರಿಂದ ಸಿಇಓಗೆ ಮನವಿ

ಕಲಬುರಗಿ:ಮೇ.14: ಮಹಾತ್ಮ ಗಾಂಧಿ ಯೋಜನೆ ಆಡಿಯಲ್ಲಿ 2020-21 ರಿಂದ 2022 ನೇ ಸಾಲಿನ ಪಂಚಾಯತಿ ರಾಜಇಲಾಖೆಯ ಅನುಷ್ಠಾನ ಮಾಡಿದ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾಮಗಾರಿಗಳು ಮಾಡದೆ ಬೋಗಸ್ ಬಿಲ್ಲನ್ನು ಸೃಷ್ಟಿಸಿ ಹಣ ನುಂಗಿ ಹಾಕಿರುವ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತವಾದ ಕಾನೂನು ಕ್ರಮಗೋಳ್ಳಬೇಕೆಂದು ದಲಿತ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಹಾತ್ಮ ಗಾಂಧಿ ಯೋಜನೆ ಅಡಿಯಲ್ಲಿ 2020 21.ರಿಂದ 2022 ನೇ ಸಾಲಿನ ಪಂಚಾಯತಿ ರಾಜ್ ಇಲಾಖೆಯ ಕಲಬುರಗಿಯಲ್ಲಿ ಅನುಷ್ಠಾನ ಮಾಡಿದ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾಮಗಾರಿಗಳು ಮಾಡದೆ ಬೋಗಸ್ ಬಿಲ್ಲನ್ನು ಸೃಷ್ಟಿಸಿ ಹಣ ನುಂಗಿ ಹಾಕಿರುವ ಸಂಬಂಧಪಟ್ಟ ಎ.ಇ.ಇ. ಮತ್ತು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಎಮ್.ಎಸ್. ಟಾಟಾ ಎಂಟರಿ, ಡಬ್ಲ್ಯೂ ಕಛೇರಿಯಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ ಇವರು ಕಾಮಗಾರಿಗಳನ್ನು ಮಾಡದೆ ಇದ್ದ ತಾಲೂಕಗಳಲ್ಲಿ ತಿರುಗಾಡಿ ಲ್ಯಾಫ್ ಟ್ಯಾಪ್ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳ ಥಂಬ್ ಇಪ್ರಮೆಷನ್ ಮಾಡಿಕೊಂಡು ಮತ್ತು ಉದ್ಯೋಗಖಾತ್ರಿ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಷನ್ ಅಧಿಕಾರಿಯಾದ ರಾಧಿಕಾ ಅವರು ಕೂಡ ಬೋಗಸ್ ದಾಖಲೆಗಳನ್ನು ಸಂಗ್ರಹ ಮಾಡುತ್ತಾರೆ.

ಗ್ರಾಮಗಳು ಮತ್ತು ತಾಲೂಕುಗಳು ಅಭಿವೃದ್ಧಿಗೋಸ್ಕರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಕೂಡ ಇಂತಹ ಭ್ರಷ್ಟ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುತ್ತಿವೆ. ಮತ್ತು ಸದರಿ ಇಲಾಖೆಯಲ್ಲಿ ಕಂಪ್ಯೂಟರ ಆಫರೆಟರ ನೌಕರರಾದ ಮಂಜುಳಾ ಅವರನ್ನು ಹುದ್ದೆಗೆ ಇಟ್ಟುಕೊಂಡರೆ ಇನ್ನೂ ಹೆಚ್ಚಿನÀ ಆವ್ಯವಹಾರ ಮಾಡಲು ಅಧಿಕಾರಿಗಳಿಗೆ ಅನುಕೂಲ ಕೊಟ್ಟಾಂತಾಗುತ್ತದೆ.

ಆದಕಾರಣ ದಯಮಾಡಿ ತಾವುಗಳು ಸದರಿ ದೂರನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿಗಳ ಮಾಡದೆ ಬೋಗಸ್ ಬಿಲ್ಲನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ನುಂಗಿ ಹಾಕಲು ಕಾರಣಿಭೂತರಾದ ದಿನಗೂಲಿ ಕಂಪ್ಯೂಟರ ಅಫರೆಟರ ನೌಕರರಾದ ಮಂಜುಳಾ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಸೆಕ್ಷನ್ ಅಧಿಕಾರಿಯಾದ ರಾಧಿಕಾ ಇವರದು ಮೂಲ ಕಾರಣರಾಗಿದ್ದಾರೆ. ಇವರ ಮೇಲೆ ಮತ್ತು ಬೋಗಸ ಬಿಲ್ಲನ್ನು ಸೃಷ್ಟಿಸಿ ಹಣ ನುಂಗಿ ಹಾಕಲು ಸಂಬಂದಪಟ್ಟವರ ಮೇಲೆ ಸೂಕ್ತವಾದ ಕಾನೂನು ಕ್ರಮಕೈಗೊಳ್ಳಬೇಕು ಒಂದು ವಾರದಲ್ಲಿ ದಿನಗೂಲಿ ಕಂಪ್ಯೂಟರ ಅಫರೆಟರ ನೌಕರರಾದ ಮಂಜುಳಾ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಇಲ್ಲವಾದಲ್ಲಿ ತಮ್ಮ ಕಛೇರಿಯ ಎದುರುಗಡೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದಲಿತ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಾಜಕುಮಾರ ಜಾಪೂರ, ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಸಂತೋಷ ದೊಡ್ಡಮನಿ ಹಾಗೂ ಕಾರ್ಯಕರ್ತರು ಇದ್ದರು.