ದಲಿತ ಜನತಾ ಕಾಲೋನಿಗಿಲ್ಲ ಮೂಲಭೂತ ಸೌಕರ್ಯ

ಹನೂರು: ಜೂ.14:- ಮಲೆ ಮಹದೇಶ್ವರ ಬೆಟ್ಟದ ಜನತಾ ಕಾಲೋನಿಯಲ್ಲಿ ಚರಂಡಿ ಹೂಳು ತುಂಬಿಕೊಂಡಿರುವುದು ಎಲ್ಲೆಂದರಲ್ಲಿ ತ್ಯಾಜ್ಯ ಕಸ ಸಂಗ್ರಹಣೆಯಾಗಿ ಗಬ್ಬೆದ್ದು ಮೂಲಭೂತ ಸೌಕರ್ಯಯಗಳಿಂದ ವಂಚಿತವಾಗಿರುವುದು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿಯು ನೆಲೆಸಿರುವ ಮಹದೇಶ್ವರ ಬೆಟ್ಟದ ದಲಿತ ಸಮುದಾಯ ವಾಸಿಸುವಂತಹ ಜನತಾ ಕಾಲೋನಿ ಹೊಸ ಸೈಟ್ ಎಂ.ಪಿ ನಗರದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚರಂಡಿಯಲ್ಲಿ ಹೂಳು ತುಂಬಿಕೊಂಡು ಗಿಡಗಂಟಿಗಳು ಬೆಳೆದು ಗಬ್ಬೆದ್ದು ನಾರುತಿದ್ದರು ಚರಂಡಿ ಹೂಳು ತೆಗೆಯಲು ಗ್ರಾಮ ಪಂ. ನಿರ್ಲಕ್ಷ ವಹಿಸಿದೆ. ಜೊತೆಗೆ ಜನತಾ ಕಾಲೋನಿಯ ಸುತ್ತಮುತ್ತಲ ಪ್ರದೇಶದಲ್ಲಿ ಕಸ ತ್ಯಾಜ್ಯಗಳನ್ನು ತಂದು ಸುರಿದು ಗುಡ್ಡೆ ಗುಡ್ಡೆ ರಾಶಿಯಾಗಿ ಸುರಿದಿರುವುದು ಕಂಡು ಬರುತ್ತದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಈ ಬಗ್ಗೆ ಗ್ರಾಮ ಪಂ. ಪಿಡಿಒ ಅವರಿಗೆ ಹಲವಾರು ಬಾರಿ ಹೇಳಿದರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಕಾಲೋನಿಯ ಸುತ್ತಮುತ್ತಲೂ ಸ್ವಚ್ಛತೆ ಇಲ್ಲದೆ ಚರಂಡಿ ನೀರು ತುಂಬಿಕೊಂಡು ಸೊಳ್ಳೆ ಕ್ರಿಮಿ ಕೀಟಗಳ ವಾಸಸ್ಥಾನವಾಗಿದ್ದು ರೋಗದ ರಚನೆಗಳು ಹರಡುವ ಭೀತಿಯಲ್ಲಿ ಇಲ್ಲಿನ ಜನರು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ತಗಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಕೂಡ ನಡೆದಿದೆ.
ಜನತಾ ಕಾಲೋನಿಯ ಅಂಗನವಾಡಿ ಕೇಂದ್ರದ ಸುತ್ತಮುತ್ತ ತ್ಯಾಜ್ಯ ಕಸಗಳನ್ನು ತಂದು ಸುರಿಯುವುದು ರಾಶಿಗಟ್ಟಲೆ ಗುಡ್ಡೆ ಗುಡ್ಡೆಯಾಗಿ ಸಂಗ್ರಹಣೆಯಾಗಿದೆ. ಇದರಿಂದ ಗಬ್ಬು ದುರ್ವಾಸನೆ ಬೀರುತ್ತಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸ್ವಚ್ಛತೆ ಇಲ್ಲದೆ ಸೊಳ್ಳೆ ಕಾಟದಿಂದ ದಿನನಿತ್ಯ ಕಳೆಯುವಂತಾಗಿದೆ.
ಜನತಾ ಕಾಲೊನಿಯಲ್ಲಿ 2017/18 ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಹಿಂದ ಬೋರು ಹಾಕಲಾಗಿತ್ತು ಬೊರಲ್ಲಿ ಚೆನ್ನಾಗಿ ನೀರು ಬರುತ್ತಿದ್ದು ನೀರಿನ ಸಮಸ್ಯೆ ಇಲ್ಲದೆ ಇಲ್ಲನ ಜನರಿಗೆ ನೀರು ಸಮರ್ಪಕವಾಗಿ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬೋರುನಲ್ಲಿ ಇದ್ದ ಮೋಟಾರ್ ಅನ್ನು ಬೇರೆ ಕಡೆ ತಗೆದು ಹಾಕಲಾಗಿದ್ದು ಬರುತ್ತಿದ್ದ ನೀರು ಸಹ ನಿಂತುಹೋಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಗ್ರಾಮ ಪಂ. ಪಿಡಿಒ ಅವರ ಗಮನಕ್ಕೆ ಹಲವಾರು ಬಾರಿ ತಂದರು ಸಹ ನಮಗೆ ಯಾವುದೇ ಕೆಲಸ ಕಾರ್ಯಗಳು ಮಾಡದೆ ನಿರ್ಲಕ್ಷ ವಹಿಸಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.