ದಲಿತ ಚಿಂತಕಿ ಡಾ.ಜಯದೇವಿ ಗಾಯಕವಾಡ ಮುಡಿಗೇರಿದ ಡಾ.ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ:ಜೂ.30: ಕರ್ನಾಟಕ ಕಂಡ ಅಪರೂಪದ ದಲಿತ ಚಿಂತಕಿ ಡಾ.ಜಯದೇವಿ ಗಾಯಕವಾಡ ಅವರ ಸಾಧನೆಗರ ಅನುಭವ ಮಂಟಪದ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು ಇದು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ವಿಷಯವೆಂದು ಬೀದರ ಜಿಲ್ಲಾ ದಲೊತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಪೀರಪ್ಪಬಿ.ಸಜ್ಜನ ನುಡಿದರು.
ಕೃಷ್ಣಾನಗರದ ಸ್ವಗೃಹದಲ್ಲಿ ಸಾಹಿತಿ ಡಾ.ಜಯದೇವಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಗುಲಬರ್ಗಾ ವಿಭಾಗದ ವಲಯ ಸಂಚಾಲಕ ಡಾ.ಗಾಂಧೀಜಿ ಮೊಳ ಕೇರಿ ಮಾತನಾಡಿ ದಲಿತ ಲೇಖಕಿಯರಲ್ಲಿ ಮುಂಚೂಣಿ ಯ ಹೆಸರು ಗಾಯಕವಾಡ ಅವರದು ಪುಸ್ತಕ ಪ್ರಾಧಿಕಾ ರ,ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಮಾಡಿದ ಕಾ ರ್ಯ ಇಂದಿಗೂ ಮರೆತಿಲ್ಲ.ಅದರೊಂದಿಗೆ ಅವರ ಸಾಹಿತ್ಯ ರಚನೆ ದಮನಿತರ ಪರವಾದುದು ಎಂದರು.
ಡಾ.ರಾಜಕುಮಾರ ಮಾಳಗೆ ,ಡಾ.ರಾಜಶೇಖರ ನರೋಣ,ಡಾ.ಪ್ರಕಾಶ ಸಂಗಮ,ಡಾ.ಚಂದ್ರಶೇಖರ ದಂಡಗುಂಡ,ಶಿವಶರಣ ರಾಮಬಾಣ,ಡಾ.ಮಹಾದೇವ,ರಾಮತೀರ್ಥ ಸಮಾಜ ಶಾಸ್ತ್ರ, ಡಸ.ಸಂದೀಪ ಹೊಳ್ಕರ್,ಸುಭಾಷ ಕಗ್ಗನಮಡಿ,ಶಿವರಾಜ ರಾಮಬಾಣ ,ಡಾ.ಗವಿಸಿದ್ಧಪ್ಪ ಪಾಟೀಲ ಇತರರು ಇದ್ದರು.