ದಲಿತ ಚಳುವಳಿ ಐಕ್ಯತಾ ಸಮಾವೇಶ

ಜಗಳೂರು.ನ.೧೫; ದಲಿತ ಚಳುವಳಿ ಐಕ್ಯತಾ ಸಮಾವೇಶಕ್ಕೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಜಾಥಾ ತೆರಳಲಾಯಿತು ಸಮಾವೇಶ ಜಾಥಾಕ್ಕೆ ಚಾಲನೆ ನೀಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಜಿ.ಎಚ್.ಶಂಭುಲಿಂಗಪ್ಪ ಮಾತನಾಡಿ ಕರ್ನಾಟಕ ಕಂಡ ಅದ್ವಿತೀಯ ಹೋರಾಟಗಾರರು   ಎರಡನೇ ಅಂಬೇಡ್ಕರ್ ಎಂದು ಗುರುತಿಸಲ್ಪಡುವ ಪ್ರೊ ಬಿ.ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿ ಪ್ರಾರಂಭಿಸಿ ನಲವತ್ತು ವರ್ಷಗಳು ಸಾಗುತ್ತಾ ಬಂದಿವೆ.ರಾಜ್ಯದ ದಲಿತ ಸೇರಿದಂತೆ ಎಲ್ಲಾ ವರ್ಗದ ಬಡವರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಸೌಲಭ್ಯಗಳಿಗೆ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ. ಎಲ್ಲಾ ಸಂಘಟನೆಗಳ ಗುರಿ ಒಂದೇ ಆದರೂ ವಿವಿಧ ಬಣಗಳಾಗಿ ಇಬ್ಬಾಗವಾಗುವುದನ್ನು ತಡೆದು ಪ್ರೊ ಕೃಷ್ಣಪ್ಪ ಅವರ ಸೈದ್ದಾಂತಿಕ ನಿಲುವಿಗೆ ಒಂದಾಗಬೇಕಾದ ಅನಿವಾರ್ಯ ಇದೆಈ ನಿಟ್ಟಿನಲ್ಲಿ  ಇಂದು ಶಿವಮೊಗ್ಗ ಜಿಲ್ಲೆಯ ಗಾಜನೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಐಕ್ಯತಾ ಸಮಾವೇಶ ನೆಡೆಯಲಿದ್ದು ತಾಲೂಕಿನಿಂದ ದಲಿತ ಸಂಘರ್ಷ ಸಮಿತಿ ಪ್ರೋ ಕೃಷ್ಣಪ್ಪ ಸ್ಥಾಪಿತ ಬಣ ಎಲ್ಲಾ ಪಧಾದಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ದಲಿತ ಮುಖಂಡ ಗ್ಯಾಸ್ ಓಬಣ್ಣ ಮಾತನಾಡಿ ಸ್ವಾಭಿಮಾನ ಹಾಗು ಹೋರಾಟದ ಗಟ್ಟಿ ಧ್ವನಿಯಾಗ ದಲಿತ ಸಂಘರ್ಷ ಸಮಿತಿ ಹಲವು ಬದಲಾವಣೆಗಳೊಂದಿಗೆ ಸಾಗಿ ಪರಿಣಾಮಕಾರಿ ಹೋರಾಟಕ್ಕ ಸ್ವಾರ್ಥ ರಹಿತವಾಗಿ ಸಮಾಜವನ್ನ ಕಟ್ಟುವಂತಹ ಯುವ ಪಡೆಯನ್ನ ಸಜ್ಜುಗೊಳಿಸಲಾಗಿದೆ ಆದರೆ ಸಂಘದಲ್ಲಿ ಕಾರ್ಯನಿರ್ವಹಿಸಲು ಅವರಿಗೆ ಡಿ.ಎಸ್.ಎಸ್.ತತ್ವ ಸಿದ್ದಾಂತಗಳನ್ನ ಪರಿಚಯ ಮಾಡಿಕೊಡುವ ಅಗತ್ಯವಿದೆ ಅದಕ್ಕಾಗಿ ಇಂತಹ ಸಭೆ ಸಮಾವೇಶಗಳಲ್ಲಿ ಸಾಮಾಜಿಕ ಹಾಗು ಹೋರಾಟದ ಪ್ರಜ್ಞೆ ಮೂಡಲು ಸಹಕಾರಿಯಾಗುತ್ತದೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ವಿವಿದ ಚಿಂತಕರಿಂದ ತರಬೇತಿ ಶಿಬಿರ ನೆಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ  ಭರಮಸಮುದ್ರ ಮಲ್ಲೇಶ್ ನಗರ ಘಟಕ ಅಧ್ಯಕ್ಷ ಶಿವಣ್ಣ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ್ ಸಂಘಟನಾ ಸಂಚಾಲಕರಾದ ಸಿ.ಎಂ.ಹೊಳೆ ನಾಗರಾಜ್ .ಮಾರುತಿ. ತಿಪ್ಪೇಸ್ವಾಮಿ .ಯಲ್ಲಪ್ಪ ಸೇರಿದಂತೆ ಹಲವರು ಇದ್ದರು