ದಲಿತ ಕೇರಿ ಸ್ಥಳಾಂತರಿಸದಿದ್ದರೆ ಚುನಾವಣೆ ಬಹಿಷ್ಕಾರ

ರಾಯಚೂರು,ಮಾ.೩೦- ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮಲದಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮಸೀದಪೂರ ಗ್ರಾಮದ ದಲಿತರ ಕೇರಿಯನ್ನು ಸ್ಥಳಾಂತರ ಮಾಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಸೀದಪೂರ ಗ್ರಾಮದ ದಲಿತರ ಕೇರಿ ಪ್ರತಿ ವರ್ಷ ಮಳೆಗಾಳದಲ್ಲಿ ಸಂಪೂರ್ಣ ಜಾಲಾವೃತಗೋಂಡು ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.ದಲಿತ ಕೇರಿಯನ್ನು ಸ್ಥಳಾಂತರಿಸಲು ನಾಡ ತಹಶಿಲ್ ಕಾರ್ಯಲಯ ಗಟ್ಟೂರು ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ದಲಿತ ಕೇರಿಯನ್ನು ಸ್ಥಳಾಂತರ ಮಾಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ನಿವಾಸಿಗಳು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾರೆಪ್ಪ ಮಲದಕಲ್, ಮಾರ್ತಾಂಡ ಗಬ್ಬೂರು, ಗಂಗಮ್ಮ ರಾಚಮ್ಮ, ಬಸಮ್ಮ,ಬೂದೆಮ್ಮ,ಯಲ್ಲಮ್ಮ ಇದ್ದರು.