
ಲಿಂಗಸುಗೂರು,ಏ.೨೩- ತಾಲ್ಲೂಕಿನ ಜಾಲಿಬೆಂಚಿ ಗ್ರಾಮದ ವಿಧ್ಯಾರ್ಥಿನಿ ಜೋತಿ ಇವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ ೯೩ ರಷ್ಟು ಅಂಕಗಳನ್ನು ವಿಜ್ಞಾನ ವಿಭಾಗದಲ್ಲಿ ಪಡೆದು ದಲಿತ ಕುಟುಂಬದಲ್ಲಿ ಅರಳಿದ ಜೋತಿ ಕುಟುಂಬದಲ್ಲಿ ಸಂಭ್ರಮ ಸಡಗರ ಮನೆಮಾಡಿದೆ ಎಂದು ಜೋತಿ ತಂದೆ ಹನುಮಂತ ಜಾಲಿಬೆಂಚಿ ಇವರು ತಮ್ಮ ಮಗಳ ಸಾಧನೆ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಜೋತಿ ಇವರು ಮಾದಿಗ ಸಮುದಾಯದ ವಿದ್ಯಾರ್ಥಿನಿ ಲಿಂಗಸುಗೂರು ನಗರದ ಸಮ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವ ಮೂಲಕ ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಕಲಿಕೆಗೆ ಪೂರಕವಾಗಿರುವ ಸಮ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ ಸಹಕಾರದಿಂದ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಜೋತಿ ಇವರು ಹೇಳಿದರು.
ಬಡ ಕುಟುಂಬದಲ್ಲಿ ಜನಿಸಿದ ಜೋತಿ ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಓದಿ ಉನ್ನತ ಶಿಕ್ಷಣ ಪಡೆಯಲು ಪಾಲಕರ ಸಹಕಾರದಿಂದ ಓದಲು ಸಹಕಾರಿಯಾಗಿದೆ.ಎಂದು ಹೇಳಿದರು.
ಜ್ಯೋತಿಗೆ ಡಾಕ್ಟರ್ ಆಗಬೇಕು ಎನ್ನುವ ಕನಸು ಕಾಣುವ ವಿದ್ಯಾರ್ಥಿನಿ ಮುಂಬರುವ ದಿನಗಳಲ್ಲಿ ಆ ಕನಸು ನನಸು ಮಾಡಲು ಮಾದಿಗ ಸಮಾಜದ ಮುಖಂಡರು ವಿದ್ಯಾರ್ಥಿನಿಗೆ ಸ್ಪೂರ್ತಿ ನೀಡಿ ವಿದ್ಯಾರ್ಥಿನಿ ಬಾಳಿನಲ್ಲಿ ಆಶಾಕಿರಣ ವಾಗಲು ಮುಂದಾಗಬೇಕು ವಿದ್ಯಾರ್ಥಿ ನಿ ಜೋತಿ ಇವರ ಅಳಲಾಗಿದೆ..
ಮಾದಿಗ ಸಮಾಜದಲ್ಲಿ ಯಾವುದೇ ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಕುಂಟಿತಗೊಳಿಸದೆ ಚಲಬಿಡದೆ ಓದಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಮಟ್ಟದ ನೌಕರಿ ತೆಗೆದು ಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಜೋತಿ ಇವರು ಸಂಜೆ ವಾಣಿ ಪತ್ರಿಕೆ ವರದಿಗಾರರಿಗೆ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಯಿ ನಾಗರತ್ನಾ ತಂದೆ ಹನುಮಂತ ಸಾಲಿ ಜಾಲಿಬೆಂಚಿ ಹಾಗೂ ಸಾಮಾಜದ ಮುಖಂಡರು ಗ್ರಾಮದ ಹಿರಿಯರು ವಿದ್ಯಾರ್ಥಿನಿ ಜೋತಿಗೆ ಶುಭಾ ಹಾರೈಸಿದರು.