ದಲಿತ ಉದ್ಯಮಿಗಳಿಗೆ ಕೈಗಾರಿಕೆಗಳ ಸ್ಥಾಪನೆಗಾಗಿ ಉದ್ಯಮಶೀಲತಾ ಕಾರ್ಯಾಗಾರ

ಕಲಬುರಗಿ:ಮಾ.06: ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಕಲ್ಯಾಣ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಯ ಆಡಿಟೋರಿಯಂನಲ್ಲಿ ಮಾರ್ಚ್ 7ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗಾರಿಕೆಗಳ ಸ್ಥಾಪನೆಗಾಗಿ ಒಂದು ದಿನದ ಉದ್ಯಮಶೀಲತಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಉದ್ಯಮಿದಾರರ ಸಂಘದ ಜಿಲ್ಲಾಧ್ಯಕ್ಷ ಡಾ. ಗಣಪತಿ ರಾಠೋಡ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ಪರಿಶಿಷ್ಟ ಸಮುದಾಯಗಳ ಉದ್ಯಮಿಗಳು ಹಾಗೂ ಉದ್ಯಮಗಳನ್ನು ಆರಂಭಿಸುವ ಯುವಕರು ಪಾಲ್ಗೊಳ್ಳಬಹುದಾಗಿದೆ ಎಂದರು.
ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯ ದಲಿತ ಉದ್ಯಮಿದಾರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್. ಹನುಮಂತಯ್ಯ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ಶಶಿಕಾಂತ್ ಪಾಟೀಲ್, ಬೆಂಗಳೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಬ್‍ನ ಶಾಖಾ ಮುಖ್ಯಸ್ಥ ಎ. ಕೋಕಿಲ್, ವಸಂತಕುಮಾರ್ ಅವರಾದಿ, ಸತೀಶ್, ಮಲ್ಲಿಕಾರ್ಜುನ್ ಜಾಕಾ, ವೀರೇಶ್ ಧವಳೆ, ಸದಾಶಿವ್ ರಾತ್ರೀಕರ್, ಶ್ರೀನಾಥ್, ಪರಮೇಶ್ವರ್ ಆರ್., ರಾಜಶೇಖರ್ ಪಾಟೀಲ್, ಸುಬ್ಬಲಕ್ಷ್ಮೀ ಧರ್ಮೇಂದ್ರ ಭೋವಿ ಮುಂತಾದವರು ಆಗಮಿಸುವರು ಎಂದು ಅವರು ಹೇಳಿದರು.
ದಲಿತ ಉದ್ಯಮದಾರರಿಗೆ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಖರಿದಿಸಲು ಶೇಕಡಾ 50ರಷ್ಟು. ಹಣ ಸರ್ಕಾರ ರಿಯಾಯಿತಿ ನಿಡುತಿತ್ತು. ಅದನ್ನೀಗ ಶೇಕಡಾ 75ಕ್ಕೆ ಏರಿಸಿದೆ. ಬಂಡವಾಳ ಹೂಡಿಕೆ ಸಾಲದ ರಿಯಾಯಿತಿ, ಬಡ್ಡಿ ಮೇಲಿನ ರಿಯಾಯಿತಿ ಸೇರಿದಂತೆ ಹಲವು ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಾಗ ಮಾತ್ರ ದಲಿತರು ನೌಕರಿಯ ಆಸೆ ಪಡೆಯದೆ ಸ್ವಯಂ ಉದ್ಯಮಿಗಳಾಗಿ ಇತರರಿಗೆ ಕೆಲಸ ನೀಡುವ ಯಶಸ್ವಿ ಕೈಗಾರಿಕೋದ್ಯಮಿಗಳಾಬಕೆಂಬ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ದಲಿತ ಉದ್ಯಮಿದಾರರು ಕೆಐಎಡಿಬಿ ಮತ್ತು ಕೆಎಸ್‍ಎಫ್‍ಸಿ. ಶಾಖೆಗಳ ಅಧಿಕಾರಿಗಳಿಗೆ ಪದೇ ಪದೇ ಭೇಟಿಯಾಗಿ ಮಾಹಿತಿ ಕೇಳಿ ಅರಿತುಕೊಂಡು ಕೈಗಾರಿಕೆಗಳ ಸ್ಥಾಪನೆಗಳಿಗೆ ಮುಂದಾಗಬೇಕಾಗಿದೆ. ಸಂಬಂಧಿತ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆ ಎಂದು ನಿರಾಶೆಗೊಳ್ಳದೆ ನಿರಾಶಕ್ತಿಯಾಗದೆ ದಿಟ್ಟ ಹೆಜ್ಜೆಯಿಟ್ಟು ತಮ್ಮ ಸಾಮಥ್ರ್ಯದೊಂದಿಗೆ ನೂತನ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಸ್ವಯಂ ಉದ್ಯೋಗಿಗಳಾಗಲು ಉದ್ಯೋಗ ನೀಡಲು ಮುಂದೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಮತ್ತು ಕೆಎಸ್‍ಐಐಡಿಸಿ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಕಲ ಮಾಹಿತಿಗಳೊಂದಿಗೆ ಬ್ಯಾಂಕುಗಳಿಗೆ ತೆರಳಿ ರಿಯಾಯಿತಿ ದರದಲ್ಲಿ ಅಂದರೆ ಸಹಾಯಧನದ ಸಾಲ ಸೌಲಭ್ಯಗಳನ್ನು ತೆಗೆದುಕೊಳ್ಳುವ ಕುರಿತಂತೆ ಕಾರ್ಯಾಗಾರದಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಸಣ್ಣ ಸಿಂಗೆ, ರೇವಣಸಿದ್ಧ ದೊಡ್ಡಮನಿ, ಹಣಮಂತ್ ಬೋಧನಕರ್, ಚಂದ್ರಕಾಂತ್ ಹಾಗರಗಿ, ಮಹಾದೇವಪ್ಪ ಗಾಜರೆ, ಬಾಬುರಾವ್ ದಂಡಿನಕರ್ ಮುಂತಾದವರು ಉಪಸ್ಥಿತರಿದ್ದರು.