ದಲಿತ ಉದ್ಯಮಶೀಲತೆ ಬೆಳೆಯಲಿ: ಶ್ರೀನಿವಾಸನ್

ಕಲಬುರಗಿ.ಮಾ.07: ದಲಿತರು ಉದ್ದಿಮೆದಾರರಾಗುವುದರ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದುವುದು ಅವಶ್ಯಕವಾಗಿದೆ ಎಂದು ಕೆಡಿಇಎ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಅಭಿಪ್ರಾಯಪಟ್ಟರು

ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಹಾಗೂ ರಾಷ್ರ್ಟೀಯ ಪಜಾ ಮತ್ತು ಪಪಂ ಹಬ್ ವತಿಯಿಂದ ಮಂಗಳವಾರ ನಗರದ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಏರ್ಪಡಿಸಿದ್ದ ದಲಿತರ ಉದ್ಯಮಶೀಲತಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ದಲಿತರು ಉದ್ಯಮ ಕ್ಷೇತ್ರಕ್ಕೆ ಬರಬೇಕು. ಸರಕಾರದಿಂದ ಸಿಗುವ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಧಿಕಾರಿಗಳಿಗೂ ಸಹ ತಮ್ಮ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಉದ್ದಿಮೆದಾರರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದರ ಮೂಲಕ ಹೊಸ ಯೋಜನೆಯನ್ನು ಅಧಿಕಾರಿಗಳ ಗಮನಕ್ಕೆ ಬರಬೇಕು. ಅಬಕಾರಿ ಇಲಾಖೆಯಲ್ಲಿ ಮಧ್ಯದ ಅಂಗಡಿ ಹಂಚುವಾಗಲೂ ದಲಿತರಿಗೆ ಮೀಸಲಾತಿ ಸಿಗಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕೇಸಿದೆ ಎಂದು ಅಧಿಕಾರಿಗಳು ಸರಕಾರಕ್ಕೆ ದಾರಿತಪ್ಪಿಸುತ್ತಿದ್ದಾರೆ ಎಂದರು.

ಈ ವೇಳೆ ಬೆಂಗಳೂರಿನ ಎಸ್ಸಿ ಎಸ್ಟಿ ಹಬ್ ನ ಶಾಖಾ ವ್ಯವಸ್ಥಾಪಕಿ ಎ. ಕೋಕಿಲಾˌ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಸಂತಕುಮಾರ ಅವರಾದಿˌ ಉಪನಿರ್ದೇಶಕ ಸತೀಶˌ ಅಭಿವ್ರದ್ಧಿ ಅಧಿಕಾರಿ ಮಲ್ಲಿಕಾರ್ಜುನ ಜಾಕಾˌ ಶ್ರೀನಾಥˌ ಪರಮೇಶ್ವರ ಆರ್ˌ ರಾಜಶೇಖರ ಪಾಟೀಲˌ ಶ್ರೀಮತಿ ಸುಬ್ದಲಕ್ಷ್ಮೀˌ ಧಮೇರ್ಂದ್ರ ಭೋವಿˌ ಕೆಡಿಇಎ ಜಿಲ್ಲಾಧ್ಯಕ್ಷ ಡಾ.ಗಣಪತಿ ರಾಠೋಡˌ ಗೌರವಾಧ್ಯಕ್ಷ ಬಸಣ್ಣ ಸಿಂಗೆˌ ಉಪಾಧ್ಯಕ್ಷ ಚಂದ್ರಕಾಂತ ಹಾಗರಗಿˌ ಪ್ರ ಕಾರ್ಯದರ್ಶಿ ಬಾಬುರಾವ ದಂಡಿನಕರ್ˌ ಮಹಾದೇವ ಎಸ್.ಜಿˌ ಹಣಮಂತ ಬೋಧನಕರ್ˌ ಜಿತೇಶ ಹೊಳಕುಂದಾˌ ವಿರೇಶ ಸುಬೇದಾರˌ ಡಾ.ಅಶೋಕ ದೊಡ್ಮನಿˌ ಶರಣಬಸಪ್ಪ ಹೊಸಮನಿˌ ಸಿದ್ಧಾರ್ಥ ಚಿಂಚೋಳಿˌ ರುಕ್ಮೇಶ ಬಂಡಾರಿˌ ಶಾಮಕುಮಾರ ಸಿಂಧೆˌ ಶ್ರೀಕಾಂತ ತಿಮ್ಮಾˌ ಆದಿತ್ಯಾ ಹಾಗರಗಿˌ ಪ್ರಥ್ವಿ ಭೋಧನˌ ಗೌತಮ್ ದೊಡ್ಮನಿˌ ಗೌತಮ ಮದನಕರ್ ಸೇರಿದಂತೆ ಇತರರು ಇದ್ದರು.