ದಲಿತರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಕುಣಿಗಲ್, ನ. ೧೪- ದಲಿತರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ತಾಲ್ಲೂಕಿನ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ವೈಫಲ್ಯದಿಂದ ಕೂಡಿದ್ದು, ಏಕಪಕ್ಷೀಯವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಮುಂದೆ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಪ್ರತಿಭಟನೆ ನಡೆಸಿ, ತಾಲ್ಲೂಕಿನಲ್ಲಿ ದಲಿತರ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಇಲಾಖೆಯ ಅಧಿಕಾರಿಗಳು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿದ್ದು ದಲಿತರ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರು ದಲಿತ ವಿರೋಧಿಯಾಗಿ ದಲಿತ ದೂರು ಸಲ್ಲಿಸಿದರೆ ಮುಖಂಡರ ಮೇಲೆ ಕೌಂಟರ್ ಕೇಸು ದಾಖಲು ಹಾಕುವ ಮೂಲಕ ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ. ಈಗಾಗಲೇ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಆರೋಪಿಸಿದರು.
ರವಿ ಎಂಬ ದಲಿತ ವ್ಯಕ್ತಿಯ ಮೇಲೆ ಸುಳ್ಳು ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದಾರೆ. ಕಳ್ಳತನದ ಆರೋಪದ ಮೇಲೆ ದಲಿತರನ್ನು ಬೆದರಿಸುತ್ತಾರೆ. ಅಮೃತೂರು ಹೊಸಕೆರೆಯ ದಲಿತ ಯುವಕನ ದೂರು ನೀಡಲು ಹೋದರೆ ಆತನ ವಿರುದ್ಧವೇ ಕೌಂಟರ್ ಕೇಸ್ ಹಾಕಲು ಹೆದರುತ್ತಾರೆ. ಹೀಗೆ ತಾಲ್ಲೂಕಿನ ಹಲವಾರು ದಲಿತರ ಮೇಲೆ ನಿರಂತರವಾದ ದೌರ್ಜನ್ಯಗಳು ದಬ್ಬಾಳಿಕೆಗಳು ನಡೆಯುತ್ತಿರುವುದರಿಂದ ಕೂಡಲೇ ಅಧಿಕಾರಿಗಳನ್ನು ಬದಲಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ, ನಾಗಣ್ಣ ಹೆಚ್ಡಿ ಚೆಲುವನಾರಾಯಣ, ಕಾರ್ಮಿಕ ಮುಖಂಡ ಕೃಷ್ಣರಾಜು, ಎನ್.ರಾಜಣ್ಣ, ಜಿ.ಕೆ. ನಾಗಣ್ಣ, ರಾಮಲಿಂಗಯ್ಯ ಸೇರಿದಂತೆ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.