
ರಾಯಚೂರು, ಏ.೦೫- ಮಸೀದಿಪುರ ಗ್ರಾಮದ ದಲಿತ ಕೇರಿ ಸ್ಥಳಾಂತರಕ್ಕೆ ಭೂಮಿ ಖರೀದಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಮತ ಬಹಿಷ್ಕರಿಸುವದಾಗಿ ಮಾದಿಗ ಮೀಸಲಾತಿ ಹೋರಾಟ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ಮಲದಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮಸೀದಪೂರ ಗ್ರಾಮದ ದಲಿತರ ಕೇರಿ ಪ್ರತಿ ವರ್ಷ ಮಳೆಗಾಳದಲ್ಲಿ ಸಂಪೂರ್ಣ
ಜಾಲಾವೃತಗೋಂಡು ನಿವಾಸಿಗಳು ನರಕಯಾತನೆ ಮಾಡುವ ಅನಿವಾರ್ಯ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ವರ್ಷಗಳಿಂದ ಸಮಸ್ಯೆ ನೆನಗುದ್ದಿಗೆ ಬಿದ್ದಿದೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ಮುಂದುವರಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮಹಿಳೆಯರು, ಚಿಕ್ಕ ಮಕ್ಕಳು, ಊರು ಮನೆ ಬಿಟ್ಟು ನಾಡ ತಹಸೀಲ್ದಾರ್ ಕಚೇರಿ ಮುಂದೆ ಜಾಲವೃತ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಸರ್ವೆ ನಂಬರ್ ೩ ರಲ್ಲಿ ೧೪ ಎಕರೆ ಜಮೀನು ಲಭ್ಯವಿದೆ. ಇದರಲ್ಲಿ ಎರಡು ಜಮೀನು ದಲಿತರ ಕುಟುಂಬಗಳ ವಸತಿಗೆ ನೀಡುವಂತೆ ಮನವಿ ಮಾಡಲಾಯಿತು. ಆದರೆ ಇದು ಕೆರೆಯ ಸ್ಥಳವಾಗಿದ್ದರಿಂದ. ಇದನ್ನು ನೀಡಲು ಅವಕಾಶ ಇಲ್ಲವೆಂದು ಜಿಲ್ಲಾಡಳಿತ ಉತ್ತರಿಸಿದೆ. ಗಬ್ಬೂರು ಸೀಮಂತರದಲ್ಲಿ ರೈತರಿಗೆ ಸೇರಿದ ಎರಡು ಎಕರೆ ಆರು ಗುಂಟೆ ಜಮೀನು ಲಭ್ಯವಿದೆ. ಈ ಜಮೀನನ್ನು ಖರೀದಿಸಿ ಜಾಲವೃತ ಸಮಸ್ಯೆ ಎದುರಿಸುತ್ತಿರುವ ೩೦ ದಲಿತ ಕುಟುಂಬಗಳಿಗೆ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.ಆದರೆ ಇಲ್ಲಿವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಂ ಆರ್ ಬೇರಿ, ಮಾರೆಪ್ಪ ಮಲದಕಲ್, ಶಾಂತಕುಮಾರ ಹೊನ್ನಟಿಗಿ, ಮಾರೆಪ್ಪ ಹೊನ್ನಟಿಗಿ, ಗಂಗಮ್ಮ ರಚಮ್ಮ ಸೇರಿದಂತೆ ಉಪಸ್ಥಿತರಿದ್ದರು.