ದಲಿತರ ಶೆಡ್ ಧ್ವಂಸ : ಕ್ರಮಕ್ಕೆ ಆಗ್ರಹ

ರಾಯಚೂರು, ನ.೧೪- ನಗರದ ವಾರ್ಡ್ ನಂ ೨೭ರ ಜಲಾಲ್ ನಗರದಲ್ಲಿ ವಾಸಿಸುವ ದಲಿತ ಕುಟುಂಬಗಳ ಗುಡಿಸಲು ಮತ್ತು ಶೆಡ್ ಗಳನ್ನು ಜಿಲ್ಲಾಡಳಿತ ಏಕಾಏಕಿ ಧ್ವಂಸಗೊಳಿಸಿದನ್ನು ಖಂಡಿಸಿ ಕರ್ನಾಟಕ ರಾಜ್ಯ ಭೋವಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಗರದ ವಾರ್ಡ ನಂ. ೨೭ರ ಜಲಾಲ ನಗರದಲ್ಲಿ ಸುಮಾರು ೧೮-೨೦ ವರ್ಷಗಳಿಂದ ಬಡ ಕುಟುಂಬಗಳು ಗುಡಿಸಲು ಟಿನ್ ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಜಿಲ್ಲಾಡಳಿತದಿಂದ ಏಕಾಏಕಿ ತಡರಾತ್ರಿ ಬಂದು ಶೆಡ್ ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಜಾಗ ಬಿಟ್ಟರೆ ವಾಸ ಮಾಡುವುದಕ್ಕೆ ಬೇರೆ ಜಾಗ ಇಲ್ಲವೆಂದು ಅಳಲು ತೋಡಿಕೊಂಡರು.
ಜಲಾಲ್ ನಗರದಲ್ಲಿ ದಲಿತ ಕುಟುಂಬಗಳು ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಕೂಲಿ ಕಲ್ಲು ಬಂಡೆ ಒಡೆಯುವವರು ಪವಾಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ, ನಗರಸಭೆಗೆ ಪ್ರತಿ ವರ್ಷ ಟ್ಯಾಕ್ಷ ಕಟ್ಟುತ್ತಿದ್ದೇವೆ. ಯೋಜನೆಯಡಿ ಗುಡಿಸಲು ಟೆನ್ ಶೆಡ್ ಗಳನ್ನು ಸಕ್ರಮಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿದರು. ಇಲಾಖೆಯಿಂದ ಸರ್ವೆ ಮಾಡಿ ಹದಬಸ್ತಿ ನಕಾಶೆ ಟಿಪ್ಪಣಿ ಮಾಡಿ ಈಗಾಗಲೇ ಸಫಾಯಿ ಕರ್ಮಚಾರಿ ಜಮೀನು ಎಲ್ಲಿ ಬರುತ್ತದೆ ಎಂದು ಹೇಳಿ ಈಗಾಗಲೆ ತಾವೇ ಇದರ ಹದಬಸ್ತಿ ಮಾಡಿರುತ್ತೀರಿ. ದುರುದ್ದೇಶದಿಂದ ಬೇರೆ ಜಾಗಕ್ಕೆ ಈಗಾಗಲೇ ಅಧಿಕಾರಿಗಳು ಹದಬಸ್ತಿ ಮಾಡಿದ್ದು ಸಫಾಯಿ ಕರ್ಮಚಾರಿ ಜನಾಂಗಕ್ಕೆ ೧ ಎಕರೆ ೨೦ ಗುಂಟೆ ಜಮೀನನ್ನು ಈಗಾಗಲೇ ರಸ್ತೆ ನಿರ್ಮಾಣ ಮಾಡಲು ಹದಬಸ್ತಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ದಲಿತ ವಾಸಿಸುವ ಟನ್, ಶೆಡ್ ಗಳನ್ನು ದುರುದ್ದೇಶದಿಂದ ಜಿಲ್ಲಾಡಳಿತ ಧ್ವಂಸಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹನುಮಂತು, ನಿವಾಸಿಗಳು ಸೇರಿದಂತೆ ಉಪಸ್ಥಿತರಿದ್ದರು.