ದಲಿತರ ಮೇಲೆ ಹಲ್ಲೆ: ದೂರು ದಾಖಲಿಸಿಕೊಳ್ಳದ ಪಿಎಸ್‌ಐ ವಜಾಕ್ಕೆ ಆಗ್ರಹ

ರಾಯಚೂರು,ನ.೧೭- ಲಿಂಗಸೂಗೂರು ತಾಲೂಕಿನ ಕಿಲಗಟ್ಟಿ ಗ್ರಾಮದಲ್ಲಿ ಬೈಲಪ್ಪ ಮಾದಿಗ ಸಮುದಾಯ ಈತನನ್ನು ಕಂಬಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ , ಜೀವದ ಬೆದರಿಕೆ ಹಾಕಿದ ಲಚಮಪ್ಪ ,ಭೀಮಪ್ಪ ಇವರ ಮೇಲೆ ಎಸ್.ಎಸ್.ಟಿ , ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಇವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಲಿಂಗಸೂಗೂರು ತಾಲೂಕಿನ ಕಿಲಗಟ್ಟಿ ಗ್ರಾಮದಲ್ಲಿ ಜೈಲಪ್ಪ ,ಹನುಮಂತ ಇವರ ಮಗಳನ್ನು ಕುರುಬ ಸಮಾಜದ ಅಚಮಪ್ಪ ಭೀಮಪ್ಪ ಇವರ ಮಗ ಅಪಹರಣ ಮಾಡಿದ್ದಾನೆಂದು ದಿ. ೧೩-೧೧-೨೦೨೦ ರಂದು ಮುದಗಲ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಿಕ್ಕೆ ಹೋಗಿದ್ದರು. ಆದರೆ ಪಿ.ಎಸ್.ಐ ರವರು ಅಪಹರಣ ಕೇಸನ್ನು ತೆಗೆದುಕೊಳ್ಳದೇ ಕಾಣೆಯಾದ ದೂರನ್ನು ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ಜೈಲಪ್ಪ ಇವರು ಸಂಬಂಧಪಟ್ಟ ಪಿ.ಎಸ್.ಐ ರವರನ್ನು ಪ್ರಶ್ನಿಸಿದರೆ ನೀನು ಹೇಳಿದ ಹಾಗೆ ಕೇಸು ಅಕಲಾಗುವುದಿಲ್ಲ.ನೀನು ಎಲ್ಲಿಗಾದರೂ, ಯಾರಿಗಾದರೂ ತಿಳಿಸು ಏನು ಮಾಡೋಕಾಗಲ್ಲ ಎಂದು ಉತ್ತರಿಸಿದ್ದಾರೆ.ದೂರು ಕೊಟ್ಟು ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಆಚಮಪ್ಪ ಭೀಮಪ್ಪ ಅವರ ಮಗ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದರೂ ಏನೂ ಪ್ರಯೋಜನವಾಗುತ್ತಿಲ್ಲ . ಲಚಮಪ್ಪ ಬೈಲಪ್ಪ ಇವರು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿ ಕುಟುಂಬ ಸಮೇತ ಉಳಿಸುವುದಿಲ್ಲವೆಂದು ಹೇಳುತ್ತಾರೆ.ಆದ್ದರಿಂದ ಕೂಡಲೇ ಮಾರಣಾಂತಿಕ ಹಲ್ಲೆ ಮಾಡಿದ ಲಚಮಪ್ಪ ಭೀಮಪ್ಪ ಇವರ ಮೇಲೆ ಅಟ್ರಸಿಟಿ ಕಾಯ್ದೆ ಅಡಿ ಹಾಗೂ ಕೊಲೆ ಬೆದರಿಕೆ ದೂರನ್ನು ದಾಖಲಿಸಿ ಹಾಗೂ ದೂರನ್ನು ದಾಖಲಿಸಲು ನಿರ್ಲಕ್ಷ ವಹಿಸಿದ ಪಿಎಸ್‌ಐ ಇವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ, ಈ ಕುಮಾರ ಸ್ವಾಮಿ,ಮಹೇಶ್ ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.