ದಲಿತರ ಮೇಲೆ ಹಲ್ಲೆ ಖಂಡಿಸಿ ಕದಸಂಸ ಮನವಿ

ಮಾನ್ವಿ.ನ.04- ಸಿರಿವಾರ ತಾಲ್ಲೂಕಿನ ಶಾಖಾಪುರ ಮತ್ತು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಖಂಡಿಸಿ ತಹಸೀಲ್ದಾರರ ಮುಖಾಂತರ ಗೃಹ ಮತ್ತು ಸಮಾಜ ಕಲ್ಯಾಣ ಮಂತ್ರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಸಲ್ಲಿಸಿದರು.
ಸಿರಿವಾರ ತಾಲ್ಲೂಕಿನ ಶಾಖಾಪುರ ಗ್ರಾಮದಲ್ಲಿ ಸುಮಾರು 1ವರ್ಷದಿಂದ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡುತ್ತಾ ಬಂದಿದ್ದಾರೆ.
ದಿನಾಂಕ 24.10.2020 ರಂದು ಶಾಖಾಪುರ ಗ್ರಾಮದ ದಲಿತರ ಮೇಲೆ ಖಾರದ ಪುಡಿ ಎರಚಿ ಕೊಡಲಿಯಿಂದ ತಲೆ ಮತ್ತು ಕಾಲಿಗೆ ಬಲವಾದ ಪೆಟ್ಟು ಮಾಡಿ ಕಾಲಿನ ಬೆರಳುಗಳನ್ನು ಸಂಪೂರ್ಣವಾಗಿ ಕತ್ತರಿಸುತ್ತಾರೆ.
ಬಳ್ಳಾರಿ ಮತ್ತು ರಾಯಚೂರು ಸರಕಾರಿ ಆಸ್ಪತ್ರೆಯಲ್ಲಿ ಅಣ್ಣ ತಮ್ಮಂದಿರು ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.ಹಲ್ಲೆಗೊಳಗಾದ ಕುಟುಂಬಗಳಿಗೆ ಪೊಲೀಸ್ ಸೂಕ್ತ ರಕ್ಷಣೆ ನೀಡಬೇಕು ಹಲ್ಲೆಗೊಳಗಾದ ದಲಿತ ಮೇಲೆ 307 ಪ್ರಕರಣ ದಾಖಲು ಮಾಡಿರುವುದು ಕಾನೂನು ಉಲ್ಲಂಘನೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಶಾಖಾಪೂರ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ಧೈರ್ಯ ತುಂಬಿ ಮೂಲಭೂತ ಸೌಲಭ್ಯ ಒದಗಿಸಬೇಕು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ದಲಿತರ ಮನೆಗೆ ನುಗ್ಗಿ ಚಪ್ಪಲಿಯಿಂದ ಹೊಡೆದು ಅವಮಾನ ಹೀನಕೃತ್ಯ ಎಸಗಿರುವ ಸವರ್ಣೀಯರ ಮೇಲೆ ಗುಂಡಾಗಿರಿ ಪ್ರಕರಣ ದಾಖಲಿಸಿ ಅಲ್ಲಿರುವ ದಲಿತ ಕೇರಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಾಂತಿ ಸಭೆ ನಡೆಸಿ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ನಕ್ಕುಂದಿ, ಯೇಸು ಅಮರೇಶ್ವರಕ್ಯಾಂಪ್, ಸಿದ್ದಪ್ಪ ಅಮರಾವತಿ, ಶಿವಪ್ಪ ಸಾಧು ಬ್ಯಾಗವಾಟ್, ಶಿವನಂದ್ ಸಾದಪೂರ, ಮಹಾದೇವಪ್ಪ ತುಪ್ಪದೂರು, ಕೆಂಚಪ್ಪ ಚಿಕ್ಕೊಟ್ನೆಕಲ್ ಉಪಸ್ಥಿತರಿ