ದಲಿತರ ಮೇಲೆ ದೌರ್ಜನ್ಯ: ತಡೆಯಲು ಪೊಲೀಸ್ ವಿಫಲ; ದಸಂಸ ಆರೋಪ

ಯಾದಗಿರಿ:ಮಾ.31: ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ, ಅಸ್ಪøಷ್ಯತೆ ಆಚರಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಹಾಗೂ ಅಗ್ನಿ ಗ್ರಾಮದ ಬಸಪ್ಪ ಚಲವಾದಿ ಸಾವಿಗೆ ಕಾರಣರಾದ ಕೆಂಭಾವಿ ಪಿಎಸ್‍ಐ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಪ್ರದರ್ಶನ ನಡೆಸಿ ಮನವಿ ಸಲ್ಲಿಸಿತು.
ಬಸಪ್ಪ ಚಲವಾದಿ ಊರಿನಲ್ಲಿ ಎಲ್ಲರೊಂದಿಗೆ ಅತ್ಯಂತ ಬಾಂಧವ್ಯದಿಂದ ಇರುತ್ತಿದ್ದರು. ಸುಮಾರು 9-10 ವರ್ಷಗಳ ಹಿಂದೆ ಈತನ 10 ಎಕರೆ ಜಮೀನು ನೀರಾವರಿಗೆ ಹೋಗಿದ್ದು ಮತ್ತು 16 ಎಕರೆ ಜಮೀನು ಊರಿನ ಕೆರೆ ನಿರ್ಮಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡು ನೀರು ನಿರ್ವಹಣೆಗಾಗಿ ಬಸಪ್ಪ ಚಲವಾದಿ ಮತ್ತು ಇತರ ನಾಲ್ವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆ ಕೆಲಸದ ಗುತ್ತಿಗೆದಾರ ಗೋಪಾಲ.ಆರ್.ರೆಡ್ಡಿ ಇಂಜಿನಿಯರ್ ಗಳಾದ ಪ್ರಮೋದ್ ರೆಡ್ಡಿ ಹನುಮಂತರೆಡ್ಡಿ ಇರುತ್ತಾರೆ.
ಕಳೆದ ಎರಡು-ಮೂರು ತಿಂಗಳ ಸಂಬಳ ಕೊಡದೆ ಪೀಡಿಸುತ್ತಿದ್ದ ಗುತ್ತಿಗೆದಾರನ ವಿರುದ್ಧ ಇಂಜಿನಿಯರುಗಳಿಗೆ ಸಂಕಷ್ಟದಿಂದ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ದಬ್ಬಾಳಿಕೆ ಘಮಂಡಿ ತನದಿಂದ ಜಾತಿ ನಿಂದನೆಯ ಮಾತುಗಳನ್ನು ಬಸಪ್ಪ ಕೇಳಬೇಕಾಯಿತು.
ದಿ 25.03.2021 ರಂದು ಬಸಪ್ಪ ಚಲವಾದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಪಡೆದಿದ್ದರೂ ಕೂಡ ಸದರಿ ರಾತ್ರಿಯವರೆಗೆ ಕೇಸ್ ದಾಖಲಿಸದೆ ಮುಚ್ಚಿಹಾಕಲು ಪ್ರಯತ್ನಿಸಿರುವುದು ಕೂಡ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಅಪರಾಧವಾಗಿದ್ದು ದೌರ್ಜನ್ಯ ನಡೆದಿದ್ದ ಅದೇ ಠಾಣೆಯಲ್ಲಿ ಕ್ರೈಮ್ ನಂ.42/21 ರಲ್ಲಿ ಕೊಲೆ ಮತ್ತು ದೌರ್ಜನ್ಯ ಅಡಿಯಲ್ಲಿ ಕೇಸು ದಾಖಲಾಗಿರುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಸಬೇಕಾದರೆ ಪಿ.ಎಸ್.ಐ. ವಿರುದ್ದ ಕ್ರಮ ಜರುಗಿಸಬೇಕೆಂದು ದಸಂಸ ಕಾರ್ಯಕರ್ತರು ಆಗ್ರಹಿಸಿದರು.
ಆಸ್ಪತ್ರೆಯಲ್ಲಿದ್ದ ಬಸಪ್ಪ ಚಲವಾದಿ ಅವರ ಹೇಳಿಕೆ ಏಕೆ ಪಡೆಯಲಿಲ್ಲ? ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆಯೂ ಕೂಡ ತನಿಖೆ ಮಾಡಿ ಎಲ್ಲ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಸಂಸ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮನವಿ ಸಲ್ಲಿಸಿದರು, ಅಜೀಜ್ ಸಾಬ ಐಕೂರು, ನಿಂಗಣ್ಣ ಕಟಿಗಿ ಶಹಾಪೂರ, ಮಾನಪ್ಪ ಬಿಜಾಸ್ಪೂರ, ಮರೆಪ್ಪ ಹಾಲಗೇರಾ, ಮಲ್ಲಿಕಾರ್ಜುನ ಕುರಕುಂದಿ, ಮಹಾದೇವಪ್ಪ ಬಿಜಾಸ್ಪೂರ, ಬಸವರಾಜ ಬಿಜಾಸ್ಪೂರ, ಬಸವರಾಜ ವೈ. ಬಿಜಾಸ್ಪೂರ, ಜಟ್ಟೆಪ್ಪ ನಾಗರಾಳ, ತಿಪ್ಪಣ್ಣ ಶೇಳ್ಳಗಿ, ಬಸವರಾಜ ಗೋನಾಲ, ಮಲ್ಲಿಕಾರ್ಜುನ ಶಾಖನೋರ್, ಮರಲಿಂಗಪ್ಪ ಹುಣಸೆಹೊಳೆ, ಮರಲಿಂಗಪ್ಪ ಹುಣಸಗಿ, ಮಲ್ಲಿಕಾರ್ಜುನ ಉಕ್ಕಿನಾಳ, ಶರಣು ಉಳ್ಳೆಸುಗೂರ, ಮಲ್ಲಪ್ಪ ಉರಸಲ, ಸಾಬರೆಡ್ಡಿ ನಾಯ್ಕೋಡಿ, ಮುತ್ತುರಾಜ ಹುಲಿಕೆರಿ, ಮಲ್ಲಿಪ್ಪ ಬಡಿಗೇರ, ಮಹೇಶ ಸುಂಗಲ್ಕರ್, ಬಾಲರೆಡ್ಡಿ ಆಂದ್ರಾ, ಜಗಪ್ಪ ಪೂಜಾರಿ ಶಿವಪೂರ ಇನ್ನಿತರರು ಇದ್ದರು.