ದಲಿತರ ಮೇಲೆ ದೌರ್ಜನ್ಯ ಆಕ್ರೋಶ

ಬಸವನಬಾಗೇವಾಡಿ:ಜು.15: ದಲಿತ ವ್ಯಕ್ತಿಯೊರ್ವ ಮೃತ ಪಟ್ಟ ಸಂಧರ್ಭದಲ್ಲಿ ಸವÀರ್ಣಿಯರು ಹೋಟೆಲಗಳನ್ನು ಬಂದ್ ಮಾಡುವ ಮೂಲಕ ದಲಿತ ವರ್ಗದ ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಸಮೀಪದ ನಾಗೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಈ ಸಂಧರ್ಭದಲ್ಲಿ ಡಿಎಸ್‍ಎಸ್ ಮುಖಂಡ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಚನ್ನು ಕಟ್ಟಿಮನಿ ಮಾತನಾಡಿ ಸಮಾನತೆಗಾಗಿ ಹೋರಾಡಿದ ಬಸವೇಶ್ವರ ಜನ್ಮ ಸ್ಥಳದಲ್ಲಿಯೇ ಅಸ್ಪಶ್ಯತೆ ತಾಂಡವಾಡುತ್ತಿದೆ ಎಂದು ಆರೋಪಿಸಿದ ಅವರು ನಾಗೂರ ಗ್ರಾಮದಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭಂವಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ ತಾಲೂಕಾ ಆಡಳಿತ ಎಚ್ಚೆತ್ತುಕೊಂಡು ಕೆಳ ವರ್ಗದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ತಡೆಯಬೇಕು ಎಂದು ಆಗ್ರಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಹಶೀಲ್ದಾರ ದುಂಡಪ್ಪಾ ಕೋಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಪಿಎಸ್‍ಐ ಎನ್ ಟಿ, ದಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ವಿಷಯ ಕುರಿತು ಸೂಕ್ತ ತನಿಖೆ ನಡೆಸಿ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಚಂದ್ರಶೇಖರ ನಾಲತವಾಡ, ಗಂಗಾಧರ ಆರ್ಯರ, ಮಾದೇವ ಕಣಕಾಲ, ಯಮನೂರಿ ಚಲವಾದಿ, ಮಾದೇವ ಕಣಕಾಲ, ರಾಜು ಆರ್ಯೆರ, ಶರಣಪ್ಪ ಮೇಲಿನಮನಿ, ಶರಣಪ್ಪ ಆರ್ಯೆರ, ಶರಣು ನಾಲತವಾಡ, ಸಂಗಪ್ಪ ನಾಲತವಾಡ, ಸೇರಿದಂತೆ ಮುಂತಾದವರು ಇದ್ದರು.