ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಾಂಗ್ರೆಸ್ ನಾಯಕರ ಮನವಿ

ಬಳ್ಳಾರಿ:ಮೇ.26- ಕಾಂಗ್ರೆಸ್ ಪಕ್ಷದ ನಾಯಕರುಗಳು ಹಾಗೂ ರಾಜ್ಯಸಭಾ ಸದಸ್ಯರುಗಳಾದ ಡಾ|| ಸೈಯದ್ ನಾಸೀರ್ ಹುಸೇನ್, , ಡಾ|| ಎಲ್. ಹನುಮಂತಯ್ಯ, ಹಾಗೂ ಪ್ರಕಾಶ್ ರಾಥೋಡ್ ರವರುಗಳು ಇತ್ತೀಚೆಗೆ ಚಿಕ್ಕಮಗಳೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿ ಡಿ.ಜಿ.ಪಿ ಪ್ರವೀಣ್ ಸೂದ್ ರವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ. ಹಾಗೆಯೇ ಸದರಿ ಪ್ರಕರಣದಲ್ಲಿ ಎಫ್.ಐ.ಆರ್ ನ್ನು ದಾಖಲಿಸಲು ವಿಳಂಭ ಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಸಹ ಸೂಕ್ತ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.