ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಚಿಂಚೋಳಿ,ಜೂ.1- ರಾಜ್ಯದಲ್ಲಿ ದಲಿತರ ಮೇಲಿನ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ದಸಂಸ ಒಕ್ಕೂದ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಳ್ಳಲಾಯಿತು.
ರಾಜ್ಯದ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆಗಿದ್ದು ಆರೋಪಿಗಳನ್ನು ಕೂಡಲೇ ಬಂದಿಸಬೇಕು ಅದೇ ರೀತಿ ವಿಜಾಪುರ ಜಿಲ್ಲೆಯ ಕುದುರಿ ಸಾಲವಾಡಗಿಯಲ್ಲಿ ಇಬ್ಬರು ದಲಿತ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು, ಆರೋಪಿಗಳನ್ನು ಬಂಧಿಸಬೇಕು ಎಂದು ಸಂಘಟನೆಯ ವಿಭಾಗೀಯ ಸಂಚಾಲಕ ಗೋಪಾಲ ರಾಂಪೆÇರೆ ಅವರು ಒತ್ತಾಯಿಸಿದರು.
ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ದಸಂಸ ಒಕ್ಕೂದ ರಾಜ್ಯಾಧ್ಯಕ್ಷ ಸೂಚನೆಯ ಮೇಲೆಗೆ ಸ್ಥಳಿಯ ಘಟಕದ ನೇತೃತ್ವದಲ್ಲಿ ಕೋವಿಡ್ -19 ಮಾರ್ಗಸೂಚಿಯಂತೆ ಮೌನ ಪ್ರತಿಭಟನೆ ಮಾಡಲಾಯಿತು.
ಕೋರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾದ ಲಾಕ್‍ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಡು ಬಡವರಿಗೆ ಘೋಷಿಸಲಾಗಿರುವ ಪ್ಯಾಕೇಜಿನ ಲಾಭ ಯಾರೊಬ್ಬರಿಗೂ ಕೂಡ Àಲುಪಿಲ್ಲ. ಕೂಡಲೇ ರಾಜ್ಯದ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ವರ್ಗಾಯಿಸಬೇಕು ಎಂದರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸೋಮಶೇಖರ್ ಬೆಡಕಪಳ್ಳಿ. ಮಾರುತಿ ಬಂಡಾರಿ. ನೂರಂದಪ್ಪ ತಳವಾರ. ಮಾಲಿಂಗ ನಾಚವಾರ. ಭೀಮಶಾ ಬಡಕೇನೋರ್. ಶ್ರೀಶೈಲ ಅಶ್ವಘೋಷ. ತಥಾಗತ ಅಭಿಜಿತ್ ರಾಂಪೆÇರೆ. ಯಶಪಾಲ ಬೆಡಕಪಳ್ಳಿ. ಮತ್ತು ಅನೇಕ ದಸಂಸ ಒಕ್ಕೂಟ ಮುಖಂಡರು ಭಾಗವಹಿಸಿದ್ದರು.