ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸಿಎಂಗೆ ಮನವಿ

ಮಾನವಿ.ಸೆ.೨೩- ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ವಿರೋಧಿಸಿ ತಾಲೂಕ ದಂಡಧಿಕಾರಿಗಳ ಮೂಲಕ ವಿವಿಧ ಸಂಘಟನೆಗಳ ಒಕ್ಕೂಟದಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಒಕ್ಕೂಟದ ಮುಖಂಡ ಬಸವರಾಜ ನಕ್ಕುಂದಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮದ ಕುಟುಂಬದವರೊಬ್ಬರು ಮಗನ ಹುಟ್ಟು ಹಬ್ಬದ ನಿಮಿತ್ಯ ದೇವಸ್ಥಾನಕ್ಕೆ ತೆರಳಿ ಮಗನಿಗೆ ದೇವರ ಆಶಿರ್ವಾದ ಪಡೆಯಲು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಎರಡು ವರ್ಷದ ಬಾಲಕ ಏಕಾಏಕಿ ಗುಡಿ ಪ್ರವೇಶ ಮಾಡಿದಾಗ ಅಲ್ಲಿನ ಅರ್ಚಕರು ಮತ್ತು ಊರಿನ ಕೆಲ ಮುಖಂಡರು ಪ್ರವೇಶ ಮಾಡಿದ ಬಾಲಕನನ್ನು ನೋಡಿ ಆಕ್ರೋಶಗೊಂಡು ನೀವು ದಲಿತ ಕುಟುಂಬಕ್ಕೆ ಸೇರಿದವರು ಗುಡಿಯೊಳಗೆ ನಿಮ್ಮ ಮಗನು ಪ್ರವೇಶ ಮಾಡಿರುವುದರಿಂದ ದೇವಸ್ಥಾನ ಶುದ್ಧಿಕರಣ ಮತ್ತು ಪೂಜೆ ಕಾರ್ಯಕ್ರಮಕ್ಕಾಗಿ ರೂ.೨೫೦೦೦/- ಗಳ ಹಣವನ್ನು ಮಗುವಿನ ತಂದೆಗೆ ದಂಡ ಹಾಕಿರುವುದು ಮಾನವ ಕುಲಕ್ಕೆ ತಲೆತಗ್ಗಿಸುವಂತೆ ಮಾಡಿದ ಆ ದೇವಸ್ಥಾನದ ಅರ್ಚಕರು ಮತ್ತು ಗ್ರಾಮಸ್ಥರು ದಂಡ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಸದರಿ ಮಿಯಾಪುರ ಗ್ರಾಮದ ದಲಿತ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆ ಕುಟುಂಬಕ್ಕೆ ಸರ್ಕಾರದಿಂಧ ೨-೦೦ ಎಕರೆ ಜಮೀನನ್ನು ಮಂಜೂರು ಮಾಡಿ ಆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದರು.
ಅದೇ ರೀತಿಯಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಡಿಗೋಳ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಚಿಂತಾಮಣಿ ಕಾಲೇಜ್ ಹೋಗುವ ಸಂದರ್ಭದಲ್ಲಿ ಬಸ್‌ನಿಂದ ಇಳಿದ ಕ್ಷಣ ಆಕೆ ದಲಿತ ವಿದ್ಯಾರ್ಥಿ ಎಂದು ಅಲ್ಲಿನ ಕೆಲ ಕಿಡಿಗೇಡಿಗಳು ಆ ವಿದ್ಯಾರ್ಥಿನಿಗೆ ಹಿಗ್ಗಾ ಮುಗ್ಗ ಥಳಿಸಿ ಜಾತಿನಿಂದನೆಗೈದು ಮನಬಂದಂತೆ ಅವಮಾನ ಮಾಡಿರುತ್ತಾರೆ.
ಕರ್ನಾಟಕ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲೂಕ, ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಹಾಗೂ ಮುಖ್ಯವಾಗಿ ಮಹಿಳೆಯರ ಮೇಲೆ ನಿರಂತರವಾಗಿ ಹಲ್ಲೆ, ಹತ್ಯಾಚಾರ, ದೌರ್ಜನ್ಯ ರಾಜ್ಯದಲ್ಲಾಗುವ ದಲಿತರಿಗೆ ಅವಮಾನಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ದಲಿತರಿಗಾಗುವ ಅನ್ಯಾಯವನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಆದೇಶಗಳನ್ನು ನೀಡಿ ಗ್ರಾಮಗಳಲ್ಲಿ ದಲಿತರಿಗಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಸಂಘಟನೆಗಳು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅಶೋಕ ನಿಲೋಗಲ್, ಬಸವರಾಜ ನಕ್ಕುಂದಿ, ಮಾರೇಶ ಬಂಡಾರಿ, ಸಿದ್ದಪ್ಪ ದೊಡ್ಡಮನಿ,ಪರಶುರಾಮ ಬಾಗಲವಾಡ, ಪ್ರದೀಪಕುಮಾರ್,ಶಿವನಾಂದ ಸಾದಪೂರ, ತಾಯಪ್ಪ ದೊಡ್ಡಿ,ಸುರೇಶ,ಪ್ರದೀಪಾ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.