ದಲಿತರ ಅವಹೇಳನ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಪ್ರತಿಭಟನೆ

ಚಿಂಚೋಳಿ,ನ.11- ಮಾಜಿ ಮುಖ್ಯಮಂತ್ರಿ ಹಾಗೂ ವಿರುದ್ಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಅವಹೇಳನಕಾರಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿ ಮಾತನಾಡಿದ ಬಿಜೆಪಿ ಎಸ್ ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಮಹೇಂದ್ರ ಪೂಜಾರಿ ಬೇಡಸುರ್ ಅವರು, ವಿರುಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಬಲವಾಗಿ ಖಂಡಿಸಿದರು.
ಕಾನೂನು ಪದವಿ ಪಡೆದ ಸಂವಿಧಾನದ ಹುದ್ದೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದು ಖಂಡನಿಯವಾಗಿದೆ. ಸಿಂದಗಿ ಉಪ ಚುನಾವಣೆಯ ಸಾರ್ವಜನಿಕ ಸಮಾರಂಭದಲ್ಲಿ ದಲಿತರು ಹೊಟ್ಟೆ ಪಾಡಿಗಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿಕೆ ನೀಡಿರುವುದು ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದರು.
ಸಂವಿಧಾನದ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರು ಈ ರೀತಿ ಹೇಳಿಕೆ ಖಂಡನಿಯವಾಗಿದೆ ಕೂಡಲೇ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಲಿತ ಸಮುದಾಯಕ್ಕೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಶ್ರೀಮಂತ ಕಟ್ಟಿಮನಿ. ಶಿವಯೋಗಿ ರುಸ್ತಾಂಪೂರ, ಜಗದೀಶಸಿಂಗ ಠಾಕೂರ್, ಪ್ರೇಮಸಿಂಗ ಜಾಧವ. ರಾಜು ಪವಾರ. ಸಂತೋಷ ಗಡಂತಿ, ಲಕ್ಷ್ಮಣ ಅವುಂಟಿ, ಭೀಮಶೇಟ್ಟಿ ಮುರುಡಾ, ಅಶೋಕ ಪಡಶೇಟ್ಟಿ, ಸತೀಶರೆಡ್ಡಿ. ಅಶೋಕ ಚವ್ಹಾಣ,ಉಮಾ ಪಾಟೀಲ, ಶಾಮರಾವ ಕೊರವಿ, ಮಲ್ಲು ಕೊಡಂಬಲ, ಹಣಮಂತ ಗರಂಪಳ್ಳಿ, ರವಿ ಶಿಂಗೆ, ಶಂಕರ್ ಜಿ ಹಿಪ್ಪರಗಿ, ಕಾಶಿನಾಥ ತಳವಾರ, ಶ್ರೀಕಾಂತ ಜಾನಕಿ, ತುಳಸಿರಾಮ, ಆಕಾಶ ಕೋಳ್ಳೂರು, ಚಂದ್ರಕಾಂತ, ಉಮೇಶ ಬೆಳಕೇರಿ. ಗೋವಿಂದ, ಶ್ರೀಕಾಂತ ಜಾನಕಿ, ತುಳಸಿರಾಮ, ಚಂದ್ರಕಾಂತ, ರಾಮಚಂದ್ರ, ಸುಂದರ ಸಾಗರ, ಚಂದ್ರಶೇಟ್ಟಿ ಜಾಧವ, ವಿಜಯ ಕುಮಾರ. ಭೀಮಶೇಟ್ಟಿ ಮುಕ್ಕಾ, ಸುಧಾಕರ ಅಣವಾರ, ವಿಠಲ ಕುಸಾಳೆ,ಬಲರಾಮ ವಲ್ಯಾಪೂರೆ, ವಿವೇಕಪಾಟೀಲ, ಮತ್ತು ಅನೇಕ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು