ದಲಿತರು, ಹಿಂದುಳಿದವರು, ಶೊಷಿತರ ಪ್ರಗತಿಗೆ ಶ್ರಮಿಸಿದ ಸಂತ : ನಾರಾಯಣ ಗುರು

ದೇವದುರ್ಗ,ಆ.೩೧- ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಜಗತ್ತಿಗೆ ಸಂದೇಶ ಸಾರಿ, ದಲಿತರು, ಹಿಂದುಳಿದವರು, ಶೋಷಿತರ ಪರವಾಗಿ ಹೋರಾಟ ಮಾಡಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣರಾದ ನಾರಾಯಣ ಗುರುಗಳು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ಯಲ್ಲನಗೌಡ ಇರಬಿಗೇರ್ ಹೇಳಿದರು. ಅವರು ಶಾಂತಿನಗರದ ಎಲ್.ಐ.ಸಿ ಕಚೇರಿಯಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಸೇವಾ ಪ್ರತಿಷ್ಠಾನ ದೇವದುರ್ಗ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ ೧೬೯ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾರಾಯಣ ಗುರುಗಳ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಳಿಕ ಪ್ರತಿಷ್ಠಾನದ ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ಮಾತನಾಡಿ, ೮ನೇ ಶತಮಾನದ ಮಧ್ಯಭಾಗದ ದಿನಗಳಲ್ಲಿ ಜಾತಿ ವ್ಯವಸ್ಥೆಯಲ್ಲಿ ದಲಿತರು, ಹಿಂದುಳಿದ ಜನಾಂಗದವರನ್ನು ಪುರೋಹಿತ ಶಾಹಿಗಳು ಶೋಷಿಸುತ್ತಿದ್ದರು. ಆ ಕಾಲದಲ್ಲಿ ಅದರ ವಿರುದ್ಧ, ಗುರುಗಳು ಶೋಷಿತ ವರ್ಗಗಳ ಪರವಾಗಿ ಹೋರಾಡಿದ ಮಹಾನ್ ಪುರುಷ, ನಾರಾಯಣ ಗುರು ಸಂದೇಶದಂತೆ ಸಂಘಟನೆಯಿಂದ ಬಲಯುತರಾಗಿ, ಶಿಕ್ಷಣದಿಂದ ಸ್ವತಂತ್ರರಾಗಿ, ಎಂಬ ಸಂದೇಶದಿಂದ ಇಂದು ಕೇರಳ ರಾಜ್ಯವು ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಂಪೂರ್ಣ ಸಾಕ್ಷರತೆ ರಾಜ್ಯವಾಗಿದೆ.
ದಲಿತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರು ಜಾಗೃತಿ ಮೂಡಿಸಿ. ಮೂಢನಂಬಿಕೆಗಳ ನಿವಾರಣೆಗೆ ಶ್ರಮಿಸಿದವರು. ಶೈಕ್ಷಣಿಕ ಪ್ರಗತಿಯಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂದು ನಂಬಿದ್ದರು. ಅದಕ್ಕಾಗಿ ಕೇರಳ ರಾಜ್ಯಾದ್ಯಂತ ಪ್ರವಾಸ ಮಾಡಿ ಸುಮಾರು ೪೨ಕ್ಕೂ ಹೆಚ್ಚು ರಾತ್ರಿ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣ ನೀಡಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸಂಚಾಲಕರಾದ ಅಮರೇಶ ಗುತ್ತೇದಾರ, ನಾಗರಾಜ ಜಾಗೀರ ಜಾಡಲದಿನ್ನಿ, ಮಹಾದೇವಪ್ಪ ನಾಗೋಲಿ, ವೆಂಕಟೇಶ ಗುತ್ತೇದಾರ, ಈಡಿಗ ಸಮಾಜದ ಮುಖಂಡರಾದ ರಾಚಣ್ಣ ಅಬಕಾರಿ ಗಣೇಕಲ್, ಗದ್ದೆಪ್ಪ ಗುತ್ತೇದಾರ, ಈಡಿಗ ಸಮಾಜದ ಅಧ್ಯಕ್ಷ ರಂಗನಾಥ ಅಬಕಾರಿ, ರಂಗನಾಥ ಗುತ್ತೇದಾರ, ರಂಗಯ್ಯ ಸುಂಕೇಶ್ವರಹಾಳ, ರಮೇಶ ಜಾಲಹಳ್ಳಿ, ರಂಗಪ್ಪ ಆಲ್ಕೋಡ್, ಶಿವು ಹೇಮನಾಳ, ಪ್ರಭು ಗೂಗಲ್, ಚನ್ನಬಸವ ನಾಗೋಲಿ, ಅಂಜಿನಯ್ಯ ಗಣೇಕಲ್, ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.