ದಲಿತರಿಗೆ ಸಾಮಾಜಿಕ ನ್ಯಾಯ ನೀಡಿದ ಪ್ರಧಾನಿ ಮೋದಿ – ಎಸ್ ದುರುಗೇಶ.


ಕೂಡ್ಲಿಗಿಜು,21 :-  ಭಾರತದ  ಇತಿಹಾಸದಲ್ಲಿ ದಲಿತರಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್.ಅವರ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ದಲಿತರ ಹೃದಯ ಮುಟ್ಟಿದ್ದಾರೆ ಎಂದು ವಿಜಯನಗರ ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಸ್ ದುರುಗೇಶ್.ತಿಳಿಸಿದರು .
ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ   ಏರ್ಪಡಿಸಿದ್ದ ಕೂಡ್ಲಿಗಿ  ಮಂಡಲ ಬಿಜೆಪಿ ಎಸ್ ಸಿ ಮೋರ್ಚ್ ಕಾರ್ಯಕಾರಣಿ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ  ಕೇಂದ್ರ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳನ್ನು ದಲಿತರಿಗೆ ನೀಡಿರಿವುದು ಇತಿಹಾಸದ ಪುಟಗಳಲ್ಲಿ ದಾಖಲಾಗುವ ಕಾರ್ಯವಾಗಿದೆ. ದಲಿತರಿಗೆ ಹೆಚ್ಚಿನ ಅವಕಾಶಗಳು ಸಿಗಲು ಇಷ್ಟು ವರ್ಷಗಳು ಕಾಯಬೇಕಾಯಿತು ಕೊನೆಗೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯವಾಯಿತು, ಎಂದರು.
ನೆಪ ಮಾತ್ರಕ್ಕೆ ಕಾಂಗ್ರೆಸ್ ದಲಿತರನ್ನು ಒಲೈಸಿ ಮತ ಪಡೆಯುತ್ತದೆ. ದಲಿತರನ್ನು ಬಳಸಿಕೊಂಡಿರುವ ಕಾಂಗ್ರೆಸ್ ಅವರಿಗೆ ಉನ್ನತ ಸ್ಥಾನಮಾನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಈಗಲಾದರೂ ದಲಿತರು ಕಾಂಗ್ರೆಸ್ ನ ಬಣ್ಣದ ಮಾತುಗಳಿಗೆ ಮರುಳಾಗದೆ ಬಿಜೆಪಿಯನ್ನು ಬಲಪಡಿಸಿದರೆ ಮತ್ತಷ್ಟು ಅಭಿವೃದ್ಧಿ ಜೊತೆಗೆ ಉನ್ನತ ಸ್ಥಾನಮಾನಗಳನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಮಂಡಲ ಬಿಜೆಪಿ ಎಸ್ಸಿ ಮೊರ್ಚ್ ಅಧ್ಯಕ್ಷರಾದ ಎ.ಕೆ.ಸಿದ್ದಲಿಂಗಪ್ಪ.ಜಿಲ್ಲಾ ಲಿಂಬ್ಯಾ ನಾಯ್ಕ್.ಕೂಡ್ಲಿಗಿ ಮಂಡಲ ಅಧ್ಯಕ್ಷ ಚೆನ್ನಪ್ಪ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಗೌಡ.ಮಂಜುನಾಥ ನಾಯಕ. ಜಿಲ್ಲಾ ಎಸ್ಟಿ ಮೊರ್ಚ್ ಕಾರ್ಯದರ್ಶಿ ಬಿ ಭೀಮೇಶ . ಎಸ್ಸಿ ಮೊರ್ಚ್ ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯ್ಕ ,ರೈತ ಮೊರ್ಚ್ ರಾಯಪುರ ಪ್ರಾಣೇಶ್ ರಾವ್.ಮಹಿಳಾ ಮೊರ್ಚ್ ಎಲ್.ಪವಿತ್ರ.ಒಬಿಸಿ ಮೊರ್ಚ್ ಹಡಗಲಿ ಬಸವರಾಜ್.ಗೋಣೇಪ್ಪ.ಸುರೇಶ್.ನಾಗರಹುಣಸೆ ದುರುಗೇಶ್.ಮಹಾಂತೇಶ್.ಕೊಟ್ರೇಶ್.ಅಕ್ಷಯ್.ಧರ್ಮನಾಯ್ಕ.ಬಡೆಲಡಕು ದುರುಗೇಶ್.ಕುಮಾರಸ್ವಾಮಿ.ಸೇರಿದಂತೆ ಕೂಡ್ಲಿಗಿ ಮಂಡಲ ಬಿಜೆಪಿ ಎಸ್ಸಿ ಮೊರ್ಚ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.