ದಲಿತರಿಗೆ ಡಿಸಿಎಂ ಗೃಹ ಸಚಿವ ಸ್ಥಾನ ನೀಡಲು ಮಾದಿಗ ದಂಡೋರ ಆಗ್ರಹ

ರಾಯಚೂರು, ಮೇ.೧೭-ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ದಲಿತರಿಗೆ ಉಪಖ್ಯಮಂತ್ರಿ ಸ್ಥಾನ ಹಾಗೂ ಗೃಹ
ಸಚಿವ ಸ್ಥಾನ ನೀಡಬೇಕು ಎಂದು ಮಾದಿಗ ದಂಡೋರ ಜಿಲ್ಲಾ ಸಮತಿ ಪದಾಧಿಕಾರಿಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮತಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಘೋಷಣೆ ಕೂಗಿ ಪತ್ರಿಕಾ ಹೇಳಿಕೆ ಮುಖಾಂತರ ಆಗ್ರಹಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತಗಳಿಂದ ಅಧಿಕಾರಕ್ಕೆ ಬಂದಿರುವ ಹಿಂದೆ ದಲಿತ ಸಮುದಾಯದ ಪ್ರಮುಖ ಪಾತ್ರವಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಬೆಂಬಲಿಸುತ್ತಲೇ ಬಂದಿದೆ ಅದರಂತೆ ನಮ್ಮ ದಲಿತ ಸಮಾಜ ಅಭಿವೃದ್ಧಿಗಾಗಿ ಸರಕಾರ ರಚನೆಯಲ್ಲಿ ಮಾದಿಗ ಜನಾಂಗದ ಹಿರಿಯ ವಿಧಾನಸಭಾ ಸದಸ್ಯರಾದ ಕೆ. ಹೆಚ್ ಮುನಿಯಪ್ಪ, ಆರ್ ಬಿ ತಿಮ್ಮಾಪುರ, ಬಸವರಾಜ ಕೆ. ಎಸ್, ರೂಪಕಲಾ ಶಶಿಧರ, ಭಗಿರಥ ಮುರಳಿ, ಹಾಗೂ ಶ್ರೀನಿವಾಸಯ್ಯ ಇವರಲ್ಲಿ ಹಿರಿಯ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೇಮರಾಜ ಆಸ್ಕಿಹಾಳ, ಜಿ. ನರಸಿಂಹಲು, ರಾಘವೇಂದ್ರ ಬೋರೆಡ್ಡಿ, ಉರುಕುಂದಿ, ಪ್ರಭುರಾಜ, ಲಕ್ಶ್ಮಣ, ಶ್ರೀಕಾಂತ್, ತಾಯಪ್ಪ, ಸಂಜೀವಕುಮಾರ, ವೆಂಕಟಸ್ವಾಮಿ, ತಿಮ್ಮಪ್ಪ ಗಂಜಹಳ್ಳಿ, ಹನುಮಂತ ತೋಟದ ಮರ್ಚೆಡ್ ಸೇರಿದಂತೆ ಉಪಸ್ಥಿತರಿದ್ದರು.