ದಲಿತರಿಗೆ ಕ್ಷೌರ ನಿರಾಕರಣೆ ಕ್ರಮಕ್ಕೆ ಆಗ್ರಹ

ಇಂಡಿ: ಫೆ.14:ತಾಲೂಕಿನ ನಿಂಬಾಳ ಆರ್.ಎಸ್ ಹಾಗೂ ನಿಂಬಾಳ ಬಿ.ಕೆ ಗ್ರಾಮದಲ್ಲಿ ದಲಿತ ಸಮುದಾಯದದವರಿಗೆ ಕ್ಷೌರ ಮಾಡಲು ನಿರಾಕರಿಸಿದ್ದು, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿ ಆರ್ ಪಿ ಐ ನಗರ ಘಟಕದ ಅಧ್ಯಕ್ಷ ಬಾಬು ಕಾಂಬಳೆ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದ್ದರು.

ಸ್ವತಂತ್ರ ಬಂದು 75 ವರ್ಷ ಕಳೆದರೂ ನಮ್ಮ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಸ್ಪøಶ್ಯತೆ ಚಾಲ್ತಿಯಲ್ಲಿದೆ. ಕ್ಷೌರ ಮಾಡಿಸಲು ಹೋದರೆ ನಮ್ಮ ಅಂಗಡಿಗೆ ಬರಬೇಡಿ , ನಿಮಗೆ ಕಟಿಂಗ್ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ತಾಲೂಕ ಆಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ತಪ್ಪಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ವಿಳಂಬ ಮಾಡಿದ್ದರೇ ತಾಲೂಕ ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆಯನ್ನು ಆರ್ ಪಿ ಐ ಘಟಕ ನೀಡಿದೆ.

ಈ ಸಂದರ್ಭದಲ್ಲಿ ಬಾಬುರಾಯ ಕಾಂಬಳೆ, ವಿರೂಪಾಕ್ಷಿ ಕಾಳೆ, ಆಕಾಶ ಮೇಲಿನಕೇರಿ, ಮರೆಪ್ಪ ಯಂಟಮಾನ, ವಿನೋದ ಹೊಸಮನಿ, ಸಂತೋಷ ಕಟ್ಟಿಮನಿ, ಇಮ್ರಾನ್ ಮಸಿಬನಾಳ, ಸಿದ್ರಾಮ ಹೊಸಮನಿ, ರಾಕೇಶ ದೊಡ್ಡಮನಿ ಇದ್ದರು.