ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೮: ಚನ್ನಗಿರಿ ತಾಲೂಕಿನ ಹಿರೇಹೋಗಲೂರು ಗ್ರಾಮದ ಮೇಲ್ವರ್ಗದ ಸಮುದಾಯವರು ಈಗಾಗಲೇ ದಲಿತರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮಂಜೂರಾತಿ ನೀಡಲಾಗಿದ್ದ ಭೂಮಿಯನ್ನು ಕೇವಲ ದಲಿತರು ಎನ್ನುವ ಕಾರಣಕ್ಕೆ ನಿವೇಶನ ಹಂಚಿಕೆ ಮಾಡದೇ ಶೋಷಣೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಸಂತೇಬೆನ್ನೂರು ಹೋಬಳಿ ಅಧ್ಯಕ್ಷ ಹಿರೇಕೋಗಲೂರು ಕುಮಾರ್ ದೂರಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ವೆ ನಂ.46 ರಲ್ಲಿ ಈಗಾಗಲೇ ಎರಡು ಎಕರೆ ಹತ್ತು ಗುಂಟೆ ನಿವೇಶನ ರೈತರಿಗೆ ನೀಡಿದ್ದು, ಅನರ್ಹ ಫಲಾನುಭವಿಗಳಿಗೆ ನೀಡಬೇಕು. ಇದೇ ಸರ್ವೆ ನಂ.46ರಲ್ಲಿ 24 ಎಕರೆ ಜಮೀನು ಉಳಿದಿದ್ದು, ಇದೇ ಸರ್ವೆ ನಂಬರ್ ಹೆಚ್ಚುವರಿ ಮಾಡಿಸಬೇಕೆಂದು ಆಗ್ರಹಿಸಿದರು.ಆದರೆ, ಗ್ರಾಮದ ಮೇಲ್ವರ್ಗದ ಜನರು ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಇಲ್ಲಸಲ್ಲದ ನೆಪ ಹೇಳಿ ಈ ಜಾಗವನ್ನು ದಲಿತರಿಗೆ ಕೊಡಬೇಡಿ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಎಂ.ಎಲ್.ಎ ಅವರು ಸ್ಥಳಕ್ಕೆ ಭೇಟಿ ನೀಡಿ ಎಸ್.ಸಿ.,ಎಸ್.ಟಿ. ದಲಿತರಿಗೆ ಸ್ಮಶಾನದಲ್ಲಿ ನಿವೇಶನ ಕೊಡುತ್ತೇವೆ ಎಂದು ಹೇಳಿದ್ದಾರೆ. ದಲಿತರನ್ನು ಗ್ರಾಮದಿಂದ ಹೊರ ಹಾಕಲು ಹುನ್ನಾರ ನಡೆಸಲಾಗಿದೆ ಎಂದು ಕಿಡಿಕಾರಿದರು.ಕೋಗಲೂರು ಗೋಮಾಳದಲ್ಲಿ ಸರ್ವೆ ನಂ.46 ರಲ್ಲಿ 58 ಎಕರೆ 3 ಗುಂಟೆ ಇದ್ದು, ಉಳಿದ ಜಮೀನು 24 ಎಕರೆ ಇದೆ ಸರ್ವೆ ನಂ.76 ರಲ್ಲಿ 20 ಎಕರೆ 22 ಗುಂಟೆ ರಲ್ಲಿ 57 ಎಕರೆ 35 ಗುಂಟೆ ಇದ್ದು, ಅದರಲ್ಲಿ ಉಳಿದ ಜಮೀನು 38 ಎಕರೆ 10 ಗುಂಟೆ ಉಳಿದಿದ್ದು, 78 ಸರ್ವೆ ನಂಬರ್‌ಲ್ಲಿ 6 ಎಕರೆ 20 ಗುಂಟೆ ಇದೆ. 94 ಸರ್ವೆ ನಂಬರಲ್ಲಿ 1 ಎಕರೆ 28 ಗುಂಟೆ ಇದೆ. ಇಷ್ಟೆಲ್ಲಾ ಸರ್ವೆ ನಂಬರಲ್ಲಿ ಜಾಗ ಇದ್ದರೂ, 81 ಸರ್ವೆ ನಂಬರನಲ್ಲಿ ರೆವಿನ್ಯೂ ಇಲಾಖೆಯವರು ಸ್ಮಶಾನ ಇರುವ ಜಾಗದಲ್ಲಿ ಸರ್ವೆ ಮಾಡಿ ನಿವೇಶ ರಹಿತರಿಗೆ ಸ್ಟೇಚ್ ಕೊಡಲು ಮುಂದಾಗಿದ್ದಾರೆ. ಕಾರಣ 81 ಸರ್ವೆ ನಂಬರಿನ ಜಮೀನು ವಾಸ ಮಾಡಲು ಯೋಗ್ಯವಾಗಿರದ ಕಾರಣ ಇದನ್ನು ವಜಾಗೊಳಿಸಬೇಕು, 46 ಸರ್ವೆ ನಂಬರಲ್ಲಿ ಜಮೀನನ್ನು ನಿವೇಶನ ರಹಿತ ರೈತರಿಗೆ ಮಂಜೂರಾತಿ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಂಜಪ್ಪ ನೀತಿಗೆರೆ, ನಾಗರಾಜ್, ಕೆ.ಪಿ.ಪ್ರವೀಣ್, ರತ್ನಮ್ಮ, ಹಸೀನಾ, ಪುಟ್ಟಮ್ಮ, ಸುನೀಲ್, ರೇವಣಪ್ಪ ಇತರರು ಇದ್ದರು.