
ಲಕ್ಷ್ಮೇಶ್ವರ,ಮಾ.19: ಪಟ್ಟಣದ ಬಿಸಿಎನ್ ಪೆÇೀಲಿಟೆಕ್ನಿಕ್ ಸಭಾಭವನದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಸರಕಾರಿ ಅನುದಾನಿತ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ತರಬೇತಿ ಕಾರ್ಯಗಾರ ಮತ್ತು ಶೈಕ್ಷಣಿಕ ಅವಧಿಯಲ್ಲಿನ ದಿನಾಚರಣೆ ದರ್ಶಿಕೆ ಪುಸ್ತಕ ಬಿಡುಗಡೆ ಸಮಾರಂಭ ಜರಗಿತು.
ಕಾರ್ಯಗಾರವನ್ನು ತಹಶೀಲ್ದಾರ್ ಕೆ ಆನಂದ್ ಶೀಲ್ ಅವರು ಸಸಿಗೆ ನೀರಿರುವ ಮೂಲಕ ಉದ್ಘಾಟಿಸಿ ಮಾತನಾಡಿ ಸಮಾಜೋದ್ಧಾರಕರ ಮತ್ತು ಶ್ರೇಷ್ಠ ದಾರ್ಶನಿಕರ ಬದುಕು ಮತ್ತು ಚಿಂತನೆಗಳ ಬಗ್ಗೆ ಹಾಗೂ ಮೌಲ್ಯಧಾರಿತ ಶಿಕ್ಷಣದ ಬಗ್ಗೆ ನೈತಿಕ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮೂಲಕ ನಾಗರಿಕರನ್ನು ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಂ ಮುಂದಿನಮುನಿ ಅವರು ಮಾತನಾಡಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು ಹೊಂದಿಕೊಂಡು ಆಧುನಿಕ ಶಿಕ್ಷಣವನ್ನು ಮತ್ತು ಮೌಲಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಹೊಸ ಶಿಕ್ಷಣ ಯೋಜನೆ ಜಾರಿಗೆ ಬರುತ್ತಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಂತೆ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ್ ಇಚ್ಚಂಗಿಯವರು ಉಪನ್ಯಾಸ ನೀಡಿ ಐದು ಮತ್ತು ಎಂಟನೆಯ ವರ್ಗಕ್ಕೆ ಪಬ್ಲಿಕ್ ಪರೀಕ್ಷೆಯನ್ನು ಸರ್ಕಾರ ನಿಗದಿಗೊಳಿಸಿದ್ದು ಇದೇ 27ರೊಳಗಾಗಿ ಸಂಬಂಧಪಟ್ಟಂತೆ ನೀತಿ ನಿರೂಪಣೆಗಳು ಲಭ್ಯವಾಗಲಿದ್ದು ಶಿಕ್ಷಕರು ಇದು ಪರೀಕ್ಷೆಯಂದು ಭಾವಿಸದೆ ಮುಂಬರುವ ಶೈಕ್ಷಣಿಕ ನೀತಿಗಾಗಿ ವಿಶೇಷವಾದಂತಹ ತರಬೇತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್‍ಎಸ್ ಅರಳಿಹಳ್ಳಿ ಶೈಕ್ಷಣಿಕ ದರ್ಶಿಕೆಯ ಸಂಪಾದಕರಾದ ಈಶ್ವರ್ ಮೆಡ್ಲೇರಿ ಬಿ.ಎಸ್ ಹರ್ಲಾಪುರ ಎಸ್‍ಎಫ್ ಮಠದ ಎಂ.ಬಿ ಹೊಸಮನಿ ಡಿ.ಎಚ್ ಪಾಟೀಲ್ ಎಚ್.ಎಂ ಗುತ್ತಲ ಎನ್.ಎಂ ಜನಿವಾರದ ಬಿ.ಎಂ ಕುಂಬಾರ್ ವಾಸದೇವ ಮಡ್ಲಿ ಸೇರಿದಂತೆ ಇತರರು ಭಾಗವಹಿಸಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಐ,ಅರ್, ಕುಲಕರ್ಣಿ ಬಸವರಾಜ ಯತ್ನಳ್ಳಿ ಹಾಗೂ ಎಂ.ಎನ್ ಭರಮಗೌಡರ ನಿರ್ವಹಿಸಿದರು.