ದರ್ಶನ ಪುಟ್ಟಣ್ಣ ಗೆಲುವು ರೈತರಿಂದ ಸಂಭ್ರಮಾಚರಣೆ

ರಾಯಚೂರು, ಮೇ.೧೪- ರೈತ ಮುಖಂಡ ದರ್ಶನ ಪುಟ್ಟಣ್ಣ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಮೇಲುಕೋಟೆಯಿಂದ ಜಯಗಳಿಸಿ ವಿಧಾನಸೌಧಕ್ಕೆ ಪ್ರವೇಶ ಪಡೆದ
ಹಿನ್ನೆಲೆಯಲ್ಲಿ ರೈತ ಮುಖಂಡರಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ನೆರೆವೇರಿಸಿ ಪಟಾಕಿ ಸಿಡಿಸುವುದರ ಜೊತೆಗೆ ಸಿಹಿ ಹಂಚಿವುದರ ಮೂಲಕ ಸಂಭ್ರಮಾಚರಣೆ ಮಾಡಿದರು.
ನಂತರ ಮಾತನಾಡಿದ ರೈತ ಮುಖಂಡ ಚಾಮರಾಜ ಮಾಲಿಪಾಟೀಲ್ ಅವರು,
ರೈತಸಂಘ, ಕಾಂಗ್ರೆಸ್ ಬೆಂಬಲಿತ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಿಂದ ಗೆಲುವು ಕಂಡಿದ್ದು ರಾಜ್ಯದ ಏಕೈಕ ಯುವ ರೈತಪ್ರತಿನಿಧಿಯಾಗಿ ವಿಧಾನಸೌಧಕ್ಕೆ ಪ್ರವೇಶ ಪಡೆದಿದ್ದಾರೆ.
ಹೆಚ್. ಎಸ್ ರುದ್ರಪ್ಪ, ಪ್ರಪೋಸರ್ ನಂಜುಂಡಪ್ಪ, ಬಾಬಾಗೌಡರು ಹಾಗೂ ಪುಟ್ಟಣ್ಣ ನಂತರ ದರ್ಶನ ಪುಟ್ಟಣ್ಣ ಅವರು ರೈತರ ದ್ವನಿಯಾಗಿ ವಿಧಾನಸೌಧಕ್ಕೆ ಪ್ರವೇಶ ಕೈಗೊಂಡಿದ್ದಾರೆ. ವಿಧಾನಸೌಧ ಪ್ರವೇಶ ಕೈಗೊಳ್ಳಲು ಅವಕಾಶ ನೀಡಿದ ಮೇಲುಕೋಟೆ ಮತದಾರರಿಗೆ ಕರ್ನಾಟಕ ರಾಜ್ಯ ಹಾಗೂ ರಾಯಚೂರು ಜಿಲ್ಲೆ ರೈತ ಸಂಘದಿಂದ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಿದರು.
ಮುಂದಿನ ದಿನದಲ್ಲಿ ಸರ್ವೋದಯ ಕರ್ನಾಟಕ ಪಕ್ಷವನ್ನು ರಾಜ್ಯಾದ್ಯಂತ ದರ್ಶನ ಪುಟ್ಟಣ್ಣ ಅವರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಗುವುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ದರ್ಶನ ಪುಟ್ಟಣ್ಣ ಅವರ ಗೆಲುವಿನಿಂದ ವಿಧಾನಸೌಧದಲ್ಲಿ ರೈತರ ಸಮಸ್ಯೆಗಳು ಅತಿ ಹೆಚ್ಚು ಚರ್ಚೆ ಆಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಇದ್ದರು.