ನಂಜನಗೂಡು: ಮಾ.27:- ದಿವಂಗತ ಆರ್ ಧ್ರುವನಾರಾಯಣ್ ಇವರ ನೆನಪಿಗಾಗಿ ದರ್ಶನ್ ಧ್ರುವ ಸ್ನೇಹ ಬಳಗ ಮತ್ತು ಲಯನ್ಸ್ ಬ್ಲಡ್ ಸೆಂಟರ್ ಜೀವದಾರ ಸಹಾಯದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು
ದಿವಂಗತ ಆರ್ ದ್ರುವ ನಾರಾಯಣ್ ಮಗ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವ ಅವರು ಧ್ರುವನಾರಾಯಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು
ನಂತರ ಮಾತನಾಡಿದವರು ಯುವಕರು ಇಂತಹ ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚು ಮಾಡಿದರೆ ಉತ್ತಮ ಇದು ಒಳ್ಳೆಯ ಬೆಳವಣಿಗೆ ಬ್ಲಡ್ ಪ್ರತಿಯೊಬ್ಬರಿಗೂ ಬಹಳ ಮುಖ್ಯ ಯಾವ ಸಮಯದಲ್ಲಾದರೂ ಕೊರತೆ ಉಂಟಾಗಬಹುದು ಇಂತಹ ಸಂದರ್ಭದಲ್ಲಿ ನಾವು ನೀಡುವ ಬ್ಲಡ್ ಉಪಯೋಗಕ್ಕೆ ಬರುತ್ತದೆ ಒಬ್ಬರಿಂದ ಒಬ್ಬರು ಸಹಾಯದಿಂದ ಜೀವಗಳನ್ನು ಉಳಿಸಬಹುದು ಆದ್ದರಿಂದ ಯುವಕರು ಇಂತಹ ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚು ಮಾಡಬೇಕು ನಾನು ಕೂಡ ಮುಂದಿನ ದಿನಗಳಲ್ಲಿ ನಿಮಗೆ ಕೈಜೋಡಿಸಿರುತ್ತೇನೆ ಎಂದರು
ನಮ್ಮ ತಂದೆಯ ನೆನಪಿಗಾಗಿ ಮುಂದಿನ ದಿನಗಳಲ್ಲಿ ನಮ್ಮ ಕುಟುಂಬವೂ ಕೂಡ ಕತ್ತದಾನ ಮಾಡುತ್ತೇವೆ ಎಂದು ತಿಳಿಸಿದರು
ಆರ್ ಪಿ ರಸ್ತೆ ಅರಮನೆ ಮೈದಾನ ಎದುರು ಮಾದೇಶ್ವರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಈ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 140ಕ್ಕೂ ಹೆಚ್ಚು ಯುವಕರು ಈ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು.
ಈ ಕಾರ್ಯಕ್ರಮಕ್ಕೆ ದರ್ಶನ್ ಧ್ರುವ ಬರುವುದನ್ನೇ ಯುವಕರು ಬೆಳಗ್ಗೆಯಿಂದಲೇ ನೋಡಲು ಸಜ್ಜಾಗಿದ್ದರು ಬಂದ ನಂತರ ಯುವಕರು ಅದ್ದೂರಿಯಾಗಿ ಸ್ವಾಗತ ಕೋರಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು ದರ್ಶನ್ ಧ್ರುವ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿ ಬಿದ್ದರು ಎಲ್ಲರ ಜೊತೆ ಸೌಜನ್ಯದಿಂದ ಮಾತನಾಡಿಸಿ ಕೈ ಮುಗಿದು ಎಲ್ಲರ ಜೊತೆಯಲ್ಲೂ ಕೂಡ ಸೆಲ್ಫಿ ತೆಗೆಸಿಕೊಂಡರು
ಇವರ ಜೊತೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷ ಕುರಟ್ಟಿ ಮಹೇಶ್ ನಗರ ಅಧ್ಯಕ್ಷ ಶಂಕರ್ ಮುಖಂಡರಾದ ಮಂಜುನಾಥ್ ಶಿವಪ್ಪ ದೇವರು ನಾಗೇಶ್ ರಾಜ್ ಮಾರುತಿ ನಗರಸಭೆ ಸದಸ್ಯರಾದ ಗಂಗಾಧರ್ ಪ್ರದೀಪ್ ಮತ್ತು ಸಂದೀಪ್ ಗೌಡ ನಂದ ಚೇತನ್ ಭರತ್ ಕಿರಣ್ ಜೀವನ್ ವಿಶ್ವ ನಂದೀಶ್ ಮಾದೇಶ ಸೂರಿ ಅಜಿತ್ ರವಿ ನಿತಿನ್ ಶಿವ ಆದರ್ಶ್ ಸೇರಿದಂತೆ ನೂರಾರು ಯುವಕರು ಭಾಗಿಯಾಗಿದ್ದರು.