ದರ್ಶನಾಪೂರ್‍ಗೆ ಸಚಿವ ಸ್ಥಾನ ನೀಡುವಂತೆ ಅಜೀಂ ಜಮಾದಾರ ಮನವಿ

ಶಹಾಪುರ:ಮೇ.26: ಕ್ಷೇತ್ರದ ನೂತನ ಶಾಸಕ ಶರಣಬಸಪ್ಪಗೌಡ ದರ್ಶನಾಪುರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಜೀಂ ಜಮಾದಾರ
ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯದೆ 17 ವರ್ಷಗಳೆ ಕಳೆದಿವೆ. ದರ್ಶನಾಪೂರ್ ಅವರು ಸಚಿವರು ಇಲ್ಲದಿದ್ದಾಗಲೂ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಕ್ಷೇತ್ರದ ಎಲ್ಲಾ ಜಾತಿ, ಧರ್ಮಗಳ ಜನರನ್ನು ಸಮನ್ವಯ, ಸಾಮರಸ್ಯದಿಂದ ಇರುವಷ ಇಂತಹ ರಾಜಕೀಯ ಮುತ್ಸದಿ ಆಗಿರುವ ದರ್ಶನಾಪೂರ್ ಅವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಅಜೀಂ ಜಮಾದಾರ ಒತ್ತಾಯಿಸಿದ್ದಾರೆ