ದರ್ಶನಾಪುರ ಅವರಿಂದ ಮರೆಮ್ಮಾ ದೇವಿಗೆ ವಿಶೇಷ ಪೂಜೆ

ಶಹಾಪುರ:ಜು.28: ನಗರದ ದೇವಿ ನಗರದ ಬಡಾವಣೆಯಲ್ಲಿರುವ ಮರಿಯಮ್ಮದೇವಿ ದೇವಸ್ಥಾನದಲ್ಲಿ ದಶಕಗಳ ವಾಡಿಕೆ ನಂಬಿಕೆಯ ಪದ್ಧತಿಯಂತೆ ಆಚರಿಸಿಕೊಂಡು ಬರಲಾಗುತ್ತಿರುವ ಆಷಾಢ ಮಾಸದಲ್ಲಿ ಒಂದು ತಿಂಗಳವರೆಗೆ ಮಂಗಳವಾರ ಶುಕ್ರವಾರ ನೀರು ನೀಡಿ ಆದಿಕಾಲದಿಂದ ನೆಲೆಸಿರುವ ಶಕ್ತಿ ದೇವತೆ ಮರೆಮ್ಮ ದೇವಿಯನ್ನು ಪೂಜಿಸಿ ನೈವೇದ್ಯ ಅರ್ಪಿಸಿ ಆಚರಣೆ ಮಾಡಲಾಯಿತು.
ಬೆಳಗ್ಗಿನ ಜಾವದಿಂದಲೆ ಕುಂಭಾ ಕಳಸ ಹೊತ್ತ ಮಹಿಳೆಯರು ಗಂಗಸ್ಥಳದಿಂದ ನೀರು ತಂದು ನಂತರ ದೇವಿಗೆ ಹೂವು ಕಾಯಿ ಕರ್ಪೂರ ದಿಂದ ಅಲಂಕರಿಸಿ ಹಲಗೆ ಬಾಜ ಭಜಂತ್ರಿಗಳ ವಾಧ್ಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ದೇವಿಗೆ ಹರಕೆ ಹೊತ್ತವರು ಹೂಡಿ ತುಂಬಿದರು.

ಕಡಬು ಹೋಳಿಗೆ ಸಜ್ಜಕ ಅನ್ನ ಗಳಂತಹ ವಿವಿಧ ರೀತಿಯ ರುಚಿಕರ ನೈವೇದ್ಯವನ್ನು ತಯಾರಿಸಿ ಬರುವ ಭಕ್ತರಿಗೆ ನೀಡಲಾಯಿತು . ಮಾಜಿ ಮಂತ್ರಿಗಳು ಹಾಲಿ ಶಾಸಕರು ಆದ ಶರಣಬಸಪ್ಪಗೌಡ ದರ್ಶನಾಪುರ ಅವರು ಸಹ ಪಾಲ್ಗೊಂಡು ದೇವಿಯ ದರ್ಶನ ಪಡೆದರು .ಜನತಯು ಮನೆ ಮಂದಿಯಂತೆ ಒಟ್ಟು ಗೂಡಿ ದೊಡ್ಡ ಹಬ್ಬದ ರೀತಿಯಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರುದ್ರಪ್ಪ ಹುಲಿಮನಿ , ಭೀಮರಾಯ ದೊಡ್ಮನಿ ಹಣಮಂತ ದೊಡ್ಮನಿ,ಖಂಡಪ್ಪ ದೊಡ್ಮನಿ,ಸೋಪಣ್ಣದರಿಯಾಪುರ, ಲಕ್ಷ್ಮಣ ಶೇಟ್ಟಿಗೇರ ಬಸವರಾಜ ಕಣೆಕಲ್ , ಮಲ್ಲಿಕಾರ್ಜುನ ಗುತ್ತೇದಾರ, ಚಂದ್ರಶೇಖರ ಸಗರ, ಭೀಮರಾಯ ನರಬೊಳ್ಳಿ, ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಮತ್ತು ಗ್ರಾಮದ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.