
ಶಹಾಪುರ:ಮೇ.18: ಐದು ಬಾರಿ ಶಾಸಕರಾಗಿರುವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅನೇಕ ಮುಖಂಡರು ಒತ್ತಾಯಿಸಿದರು. ಪಟ್ಟಣದಲ್ಲಿ ಈ ಕುರಿತು ಮಾತನಾಡಿರುವ ಮುಖಂಡರು, ಶರಣಬಸಪ್ಪಗೌಡ ದರ್ಶನಾಪುರ ಅವರು ಹಿರಿಯ ಶಾಸಕರಾಗಿದ್ದು ಅವರ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಐದು ಬಾರಿ ಶಾಸಕರಾಗಿರುವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಲಿಂಗನಗೌಡ ಮಾಲಿ ಪಾಟೀಲ್ ಕೆಂಭಾವಿ, ಶಂಕ್ರಣ್ಣ ವಣಿಕ್ಯಾಳ, ಸಿದ್ದನಗೌಡ ಪೆÇೀಲಿಸ್ ಪಾಟೀಲ್ ಕೆಂಭಾವಿ, ಬಸನಗೌಡ ಹೊಸಮನಿ ಯಾಳಗಿ, ಬಾಪುಗೌಡ ಪಾಟೀಲ್, ವಾಮನರಾವ್ ದೇಶಪಾಂಡೆ, ಶರಣಬಸವ (ಕಾಕಾ ) ಡಿಗ್ಗಾವಿ, ಅಮಿನರಡ್ಡಿ ಪಾಟೀಲ್ ಕಿರದಳ್ಳಿ, ಎಸ್.ಕೆ.ಕೆಂಭಾವಿ, ಸಂಗಣ್ಣಗೌಡ ಮರಡ್ಡಿ, ಮಹೇಶ ಹುಜರಾತಿ, ಮಲ್ಲಣ್ಣ ಹೆಗ್ಗೆರಿ, ಗೋವಿಂದಪ್ಪ ದೊರೆ, ಸಣ್ಯಾಕಪ್ಪ ಸಾಹುಕಾರ ,
ಮಾನಪ್ಪ ಸೂಗೂರ, ಭೀಮಣ್ಣ ನಾರಾಯಣಪುರ, ಸುಭಾನಿ ಮುಲ್ಲಾ, ರಂಗಪ್ಪ ಭೋವಿ,ಮಡಿವಾಳಪ್ಪ ಹೆಗ್ಗನದೊಡ್ಡಿ, ಹಲವಾರು ಗ್ರಾಮಗಳ ಮುಖಂಡರು ಯುವಕರು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಧ್ಯಕ್ಷರುಗಳು ಒತ್ತಾಯಿಸಿದರು.