ದರ್ಶನಾಪುರರನ್ನು ಮಂತ್ರಿ ಮಾಡಲು ಒತ್ತಾಯ

ಕಲಬುರಗಿ:ಮೇ.17: ಶಹಾಪುರ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವರು, ಹಿರಿಯ ಅನುಭವಿ ರಾಜಕಾರಣಿಯಾದ ಎಲ್ಲಾ ವರ್ಗದ ಹಿತ ಕಾಪಾಡುವ ಶರಣಬಸಪ್ಪಗೌಡ ದರ್ಶನಾಪುರವರನ್ನು ಸಂಪುಟ ದರ್ಜೆ ಸಚಿವರಾಗಿ ನೇಮಕ ಮಾಡಬೇಕೆಂದು ಕರ್ನಾಟಕ ರಾಜ್ಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಕಲಬುರಗಿ ಯುವ ಘಟಕದ ಅಧ್ಯಕ್ಷ ಮಹೇಶರೆಡ್ಡಿ ಹಾಗೂ ಕಾರ್ಯಾಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಮಾಜಕ್ಕೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಈ ಸಲ ರೆಡ್ಡಿ ಸಮಾಜದ ಏಳಿಗೆಗಾಗಿ ಹಾಗೂ ಸಮಾಜದಲ್ಲಿ ಪ್ರಾಮುಖ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡಗೆ ಮನವಿ ಮಾಡಿದ್ದಾರೆ.