ದರ್ಶನಾಪುರಗೆ ಮತ್ತೆ ಜನರ ಆಶೀರ್ವಾದ ; ಚಂದಣ್ಣ ಸೇರಿ

ಶಹಾಪುರ :ಮೇ.17: ಕಳೆದ ಐದು ವರ್ಷಗಳಿಂದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಬಿಡುವಿಲ್ಲದೆ ತಾಲೂಕಿನದ್ಯಂತ ಸಂಚರಿಸಿ ಅಭಿವೃದ್ಧಿ ಕಾರ್ಯಗಳು ಕೈಗೊಂಡಿದ್ದಾರೆ,ಆದ್ದರಿಂದ ಮತ್ತೆ ಈ ಬಾರಿ ಅವರಿಗೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮುಖಂಡರಾದ ಚಂದಣ್ಣ ಸೇರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅವರ ಪರವಾಗಿ ಅಭಿನಂದನೆಗಳು ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶಾಸಕ ದರ್ಶನಾಪೂರ ಅವರು ಮಂತ್ರಿಗಳಾಗುವುದು ಅಷ್ಟೇ ಸತ್ಯ ಕಾರಣ ವಿಧಾನಸಭೆಗೆ ಐದನೇ ಬಾರಿ ಚುನಾಯಿತರಾದ ಹಿರಿತನದ ಅನುಭವ ಇವರಿಗಿದೆ. ಶಾಸಕ ಶರಣಬಸಪ್ಪಗೌಡ ದರ್ಶನಪುರವರು ಪ್ರಾಮಾಣಿಕವಾಗಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಜನಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಕಾರ್ಯವೈಖರಿಯನ್ನ ಪರಿಗಣಿಸಿ,ಸಚಿವ ಸಂಪುಟದಲ್ಲಿ ಉನ್ನತ ಖಾತೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಮಾಡಲು ದೊರಕಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಈ ಅನುಕೂಲ ಮಾಡಿಕೊಟ್ಟ ಮತದಾರ ಪ್ರಭುಗಳಿಗೆ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.