ದರ್ಶನಾಪುರಗೆ ಮಂತ್ರಿ ಸ್ಥಾನ ನೀಡಲು ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕಲಬುರಗಿ:ಮೇ.21: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದ್ದು, ಇದೀಗ ಮಂತ್ರಿಗಿರಿಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಬಾರಿ ಲಾಬಿ ನಡೆಸುತ್ತಿದ್ದು, ಅವರ ಅಭಿಮಾನಿಗಳಿಂದಲೂ ಒತ್ತಾಯ ಹೆಚ್ಚುತ್ತಿದೆ.

ಶಹಪುರದ ಶಾಸಕ ಶರಣಬಸಪ್ಪ ದರ್ಶನಾಪುರಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಕಲಬುರಗಿ ಜಿಲ್ಲೆಯ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶನಿವಾರ ಯುವ ನಾಯಕ ಗುಂಡು ಪಾಟೀಲ್ ನೇತೃತ್ವದಲ್ಲಿ ದತ್ತನ ಸನ್ನಿಧಾನದಲ್ಲಿ ವಿಶೇಷ ರುದ್ರಾಭಿμÉೀಕ ಪೂಜೆ ಸಲ್ಲಿಸಿ, ಶಹಪುರ ವಿಧಾನಸಭೆ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶರಣಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಲಿವೆ. ಅಲ್ಲದೇ, ಈ ಭಾಗದ ಹಿರಿಯ ನಾಯಕರಾದ ಅವರಿಗೆ ಅನುಭವದ ಆಧಾರದ ಮೇಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಗುಂಡು ಪಾಟೀಲ್,ವಿಶ್ವ ತುಂಬಗಿ ವಿನೋದ್ ಬಿರಾದಾರ್, ಬಸು ಪಾಟೀಲ್, ಸಚಿನ್, ಅಮಿತ್ ಸಾಲಿಮಠ ಸೇರಿ ಅನೇಕರು ಉಪಸ್ಥಿತರಿದ್ದರು.