ದರ್ಶನಕ್ಕೆ ಬರುವ ಭಕ್ತರಿಗೆ 3ಲಕ್ಷಕ್ಕೂ ಅಧಿಕ ಮಾಸ್ಕ ವಿತರಣೆ

ವಿಜಯಪುರ:ಜ.4: ನಡೆದಾಡುವ ದೇವರು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರಿಗೆ 3ಲಕ್ಷಕ್ಕೂ ಅಧಿಕ ಮಾಸ್ಕಗಳನ್ನು ವಿತರಿಸಲಾಯಿತು.

  ನಗರದ ಎ ಎಸ್ ಪಿ ಮಹಾವಿದ್ಯಾಲಯದ ಆವರಣದಲ್ಲಿ ಬಿ. ಎಲ್. ಡಿ.ಇ ಯೂಥ್ ರೆಡ್ ಕ್ರಾಸ್ ಶಾಖೆ ಮತ್ತು ಎ ಎಸ್ ಪಾಟೀಲ್ ಕಾಲೇಜುಗಳ ಸಾಯೋಗದಲ್ಲಿ 3 ಲಕ್ಷಕ್ಕೂ ಹೆಚ್ಚು ಮಾಸ್ಕಗಳನ್ನು ವಿತರಿಸಲಾಯಿತು. ಸೋಲಾಪುರ,ಹೊರ್ತಿ, ಚಡಚಣ, ಝಳಕಿ, ಬರಟಗಿ, ಪಂಢರಾಪುರ ಮಾರ್ಗದಿಂದ ಬಂದ ಭಕ್ತರು ಹಾಗೂ ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ , ಮಾಸ್ಕಗಳನ್ನು ನೀಡಲಾಯಿತು.
 ಮಹಾವಿದ್ಯಾಲಯದ ಪ್ರಾಚಾರ್ಯರು ಎಸ್ ಜಿ.ರೋಡಗಿ ಎನ್. ಎಸ್. ಎಸ್ ಅಧಿಕಾರಿಗಳಾದ ಪೆÇ್ರ. ಐ. ಬಿ. ಚಿಪ್ಪಾಲಕಟ್ಟಿ, ಪೆÇ್ರ. ಪಿ. ಎಸ್. ತೊಳನೂರ್, ಪೆÇ್ರ. ಪ್ರದೀಪ.ಎಚ್. ಕುಂಬಾರ, ಪೆÇ್ರ. ವಿಜಯಕುಮಾರ ತಳವಾರ, ಡಾ. ಭಕ್ತಿ ಮಹಿಂದ್ರಕರ್, ಡಾ.ಭಾರತಿ ಮಠ್ ಹಾಗೂ ಎನ್. ಎಸ್. ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.