
ರಾಯಚೂರು,ಮಾ.೯ -ನಗರದ ಹಜರತ್ ಸೈಯ್ಯದ್ ಶಾ ಕರೀಮುಲ್ಲಾ ಖಾದ್ರಿ, ಶಹೀದ್ ದರ್ಗಾ ಜಾಗ ಇನಾಂ ಭೂಮಿ ಒತ್ತುವರಿ ಮಾಡುವ ಹುನ್ನಾರ ನಡೆದಿದ್ದು, ದರ್ಗಾದ ಭೂಮಿ ರಕ್ಷಣೆ ಮಾಡಬೇಕು ಎಂದು ಸೈಯದ್ ಹರೀಸ್ ಮೊಹಿವುದ್ದಿನ್ ಖಾದ್ರಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಹಜರತ್ ಸೈಯ್ಯದ್ ಶಾ ಕರೀಮುಲ್ಲಾ ಖಾದಿ, ತಹೀದ್ ರಹಮ ತುಲ್ಲಾ ಅಲೈ ದರ್ಗಾದ ವಾರಸುದಾರರು ಮತ್ತು ಮೂಲ ಮಾಲೀಕರು ದರ್ಗಾದ ೧೮ ಎಕರೆ ೩೦ ಗುಂಟೆ ಜಮೀನು ಇದ್ದು ಇದ ರಲ್ಲಿ ೬ ಎಕರೆ ಜಮೀನು೧೯೬೪-೬೫ ರಲ್ಲಿ ಐಟಿಐ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಲೇಜು ಸಲುವಾಗಿ ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡು, ಈ ಮಾಲೀಕರಿಗೆ ಗೌರವಧನ ನೀಡಲಾಗಿದೆ. ಉಳಿದ ೧೨ ಎಕರೆಯಲ್ಲಿ ಜಮೀನು ಬೀಳು ಇತ್ತು, ಪಕ್ಕದಲ್ಲಿ, ನಿವಾಸಿಗಳು ಬೀಳು ಯಾಕೆ ಬಿಡುತ್ತೀರಿ ಇದರಲಿ ನಾವು ಒಕ್ಕಲುತನ ಮಾಡಿ ಕೊಂಡು ಹೋಗುತ್ತೇವೆಂದು ಹುಸೇನಪ್ಪ ಮತ್ತು ರಾಮಣ್ಣ ವಡ್ಡರ, ಮತ್ತೊಬ್ಬರು ಹೇಳಿದ್ದರು, ನಮ್ಮ ಅವರ ಮಧ್ಯ ಯಾವುದೇ ಕರಾರು ಇಲ್ಲ, ವರ್ಷದಲ್ಲಿ ೨-೩ ಸಲ ರಾಯಚೂರಿಗೆ ಬಂದು ಉರುಸು ಗಂಧ ಮಾಡಿ ಹೋಗುತ್ತಿದ್ದೆವು ಆದರೆ ಒಕ್ಕಲುತನ ಮಾಡುವವರು ಕಾನೂನು ಬಾಹೀರವಾಗಿ ೧೯೭೮ ರಲ್ಲಿ ಇನಾಂ ಭೂಮಿ ತಮ್ಮ ಹೆಸರಿಗೆ ಮಾಡಿಕೊಂಡು ೧೯೯೦-೯೧ರಲ್ಲಿ ಮಾನ್ವಿ ತಾಲೂಕಿನ ಮಾಜಿ ಶಾಸಕ ಬ್ಯಾಗವಾಟ ಬಸನಗೌಡ ಇವರಿಗೆ ಮಾರಾಟ ಮಾಡಿದ್ದಾರೆ.ಈ ಬಗ್ಗೆ ಹೈಕೋರ್ಟಿ ಮತ್ತು ಲ್ಯಾಂಡ್ ಟ್ರಿಬಿನಲ್‌ನಲ್ಲಿ ದಾವೆ ಹೂಡಲಾಗಿತ್ತು, ಲ್ಯಾಂಡ್ ಟ್ರಿಬಿನಲ್ ನವರು ಏಕ ಪಕ್ಷವಾಗಿ ನಿರ್ಣಯ ತೆಗೆದುಕೊಂಡು ಟೆನೆ೦ಟ್ ಅಂತ ಘೋಷಣೆ ಮಾಡಿದರು ಎಂದರು.
೧೨ ಎಕರೆ ಜಮೀನು ಭಾಗವಾಟಿ ಬಸನಗೌಡ ಇವರಿಗೆ ಮಾರಾಟ ಮಾಡಿದ್ದು, ಸುಪ್ರೀಂ ಕೊರ್ಟ್ ಆದೇಶದ ಪ್ರಕಾರವರ ಪಹಣಿಯ ಕಲಂ ನಂ ೯ ಮತ್ತು ೧೧ರಲ್ಲಿ ದರ್ಗಾ ಮತ್ತು ಮುತದಲ್ಲಿ ಹೆಸರು ಬರಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಸದರಿ ಜಮೀನಿನಲ್ಲಿ ನಾಮ ಫಲಕ ಕೂಡ ಹಾಕಲಾಗಿತ್ತು.
ನಗರಸಭೆ ಅಧ್ಯಕ್ಷೆ ಪತಿ ಕಡಗೋಲ್ ಆಜನೇಯ ಅವರು ಲೇಔಟ್ ಮಾಡುತ್ತಿದ್ದಾರೆ ಎಂದು ಅಲ್ಲಿಯ ಕೆಲಸಗಾರರು ಹೇಳುತ್ತಿದ್ದಾರೆ.ಆದ್ದರಿಂದ ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯ ಕೈಗೊಳ್ಳಬಾರದು ಎಂದು ಎಲ್ಲಾ ಕಚೇರಿಗಳಿಗೆ ಆದೇಶ ನೀಡಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸೈಯದ್ ಗೌಸ್ ಮೊದ್ದಿನ್, ಮಹೆಮೂದ್, ಅಬ್ದುಲ್ ರಶೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.