ದರ್ಗಾಕ್ಕೆ  ಹೂವಿನ ಹೊದಿಕೆ ಅರ್ಪಣೆ

ಸಂಜೆವಾಣಿ ವಾರ್ತೆ

ಮಲೇಬೆನ್ನೂರು.ಫೆ.26: ಇಲ್ಲಿನ ಸೂಫಿ ಸಂತ ಹಜರತ್ ಸೈಯದ್ ಹಬೀಬ್ ವುಲ್ಲಾ ಷಾ ಖಾದ್ರಿ ರವರ ಉರುಸ್ ಪ್ರಯುಕ್ತ ಹರಿಹರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ ಅವರು ಇಂದು ದರ್ಗಾ ಕ್ಕೆ (ಚಾದರ್ )ಹೂವಿನ ಹೊದಿಕೆ ಅರ್ಪಿಸಿದರು. ದರ್ಗಾ ಕ್ಕೆ ಭೇಟಿ ನೀಡಿದ ನಂದಿಗಾವಿ ಶ್ರೀನಿವಾಸ ರನ್ನು ಹಬಿಬ್ ವುಲ್ಲಾ ಷಾ ಖಾದ್ರಿ ದರ್ಗಾ ಸಮಿತಿ ಯವರು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಲೇಬೆನ್ನುರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಬಿ.ಅಬಿದ್ ಅಲಿ.ಮುಖಂಡರಾದ ಡಾ.ಬಿ.ಚಂದ್ರಶೇಖರ. ಸೈಯದ್ ಜಾಕಿರ್.ಕೆ.ಪಿ.ಗಂಗಾಧರ,.ಯುನೂಸು.ಬಗರ ಹುಕುಂ ಸಮಿತಿಯ ಸದಸ್ಯ ಹೆಚ್.ಬಿ.ಚಂದ್ರಶೇಖರ. ಕೊಟ್ರೇಶ್ ನಾಯಕ್.ಪುರಸಭಾ ಸದಸ್ಯ ಮಹಮದ್ ನಯಾಜ್ ಅಹ್ಮದ್, ಬುಡ್ಡವರ ರಫೀಕ್,ಚಮನ್ ಷಾ, ಬ್ರೂಹಾನ್,ಉರುಸ್ ಕಮಿಟಿ ಯ ರಫೀವುಲ್ಲಾ ಕೆ. ಎಂ.ಬಿ.ಅಕ್ಬರ್ ಅಲಿ. ಸಾಬಿರ್ ಅಲಿ.ಇದ್ದರು.