ದರೋಡೆ ಪ್ರಕರಣ: ಇಬ್ಬರ ಸೆರೆ 

ಕಾಸರಗೋಡು, ನ.೨೦- ಪಿಗ್ಮಿ ಏಜಂಟ್ ನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಮುಳಿಯಾರು ಬಾಲನಡ್ಕದ ಮುಹಮ್ಮದ್ ರಫೀಕ್ (26) ಮತ್ತು ಅಮ್ಮಂಗೋಡಿನ ನೌಫಾಲ್ ಅಲಿ (19) ಬಂಧಿತರು. ನ .4ರಂದು ಯೂನಿಯನ್ ಬ್ಯಾಂಕ್ ನ ಬೋವಿಕ್ಕಾನ ಬ್ರಾಂಚ್ ನ ಪಿಗ್ಮಿ ಏಜಂಟ್ ರಾಮಕೃಷ್ಣ ಆಚಾರಿ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ತಂಡವು ತಲೆಗೆ ಬಡಿದು 23 ಸಾವಿರ ರೂ . ನಗದು ಹಾಗೂ ದಾಖಲೆಗಳನ್ನು ಒಳಗೊಂಡ ದರೋಡೆ ಮಾಡಿತ್ತು. ಇದಲ್ಲದೆ ಅಕ್ಟೋಬರ್ 29 ರಂದು ರಾತ್ರಿ ಪೇರಡ್ಕದ ಸಿನೋಜ್ ರವರ ಮಾಲಕತ್ವದ ಅಂಗಡಿಗೆ ನುಗ್ಗಿ ಎರಡು ಕ್ವಿಂಟಾಲ್ ಅಡಿಕೆ ಮತ್ತು 25 ಕಿಲೋ ಕಾಳುಮೆಣಸು ಕಳವು ಗೈದ ಪ್ರಕರಣದ ಆರೋಪಿಗಳಾಗಿದ್ದಾರೆ. ಪಿಗ್ಮಿ ಏಜಂಟ್ ನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿ ವಿಚಾರಣೆ ನಡೆಸಿದಾಗ ಅಡಿಕೆ ಮತ್ತು ಕಾಳು ಮೆಣಸು ಕಳವು ನಡೆಸಿರುವುದನ್ನು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.