ದರೋಡೆಗೆ ಹೊಂಚು : ಹರಪನಹಳ್ಳಿ ಮೂಲದ ಐವರ ಬಂಧನ

ಶಿವಮೊಗ್ಗ, ಜ. 14:ದರೋಡೆಗೆ ಹೊಂಚು ಹಾಕಿದ್ದ ಆರೋಪದ ಮೇರೆಗೆ ಐವರು ಆರೋಪಗಳನ್ನು ಶಿವಮೊಗ್ಗ ತಾಲೂಕು ಕುಂಸಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮೂಲದ ಅಂಜನಪ್ಪ, ಹನುಮಂತಪ್ಪ, ಧರ್ಮಪ್ಪ, ಸಂತೋಷ್ ಹಾಗೂ ರತಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಹಾರನಹಳ್ಳಿ ಕೆರೆ ಬಳಿ ಆರೋಪಿಗಳು ದರೋಡೆಗೆ ಹೊಂಚು ಹಾಕಿ ಬೀಡುಬಿಟ್ಟಿದ್ದರು. ಈ ಕುರಿತಂತೆ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳು ದರೋಡೆಯ ಜೊತೆಗೆ ನಕಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ನೀಡಿ ಜನರಿಗೆ ವಂಚಿಸುತ್ತಿದ್ದ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಬಂಧಿತರಿಂದ ಕಬ್ಬಿಣದ ರಾಡು, ಖಾರದಪುಡಿ, ಗರಗಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.