ದರೋಡೆಕೋರ ಸುಬೇ ಸಿಂಗ್ ಗುಜ್ಜರ್ ಬಂಧನ

ನವದೆಹಲಿ, ಮೇ.೨-ಕೊಲೆ, ಕೊಲೆ ಯತ್ನ,ಬೆದರಿಕೆ ಸುಲಿಗೆ ಸೇರಿದಂತೆ ೧೦೦ ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಟೆಂಡ್ ದರೋಡೆಕೋರ ಸುಬೇ ಸಿಂಗ್ ಗುಜ್ಜರ್‌ನನ್ನು ಹರಿಯಾಣ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ದರೋಡೆಕೋರ ಸುಬೇ ಸಿಂಗ್ ಗುಜ್ಜರ್ (೩೨) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮ್ ನ ಮೋಸ್ಟ್ ವಾಂಟೆಡ್ ದರೋಡೆಕೋರ ಸುಬೆ ಸಿಂಗ್ ಗುಜ್ಜರ್ ಇನ್ನೊಬ್ಬ ದರೋಡೆಕೋರ ಕೌಶಲ್ ನ ಬಲಗೈ ಬಂಟನಾಗಿದ್ದ
ಹಣಕಾಸಿನ ವ್ಯವಹಾರದಲ್ಲಿ ವೈಮನಸ್ಯ ಉಂಟಾಗಿ ಇಬ್ಬರು ಬೇರ್ಪಟ್ಟಿದ್ದು ಗುಜ್ಜರ್ ಕೌಶಲ್ ಸುಲಿಗೆ ದಂಧೆಯನ್ನು ಗುರಿಯಾಗಿಸಲು ಪ್ರಾರಂಭಿಸಿದ್ದು ಆತನನ್ನು ಬಂಧಿಸಿದ ನಂತರ ಅವರು ಕೌಶಲ್ ಅವರ ಗ್ಯಾಂಗ್ ಅನ್ನು ವಹಿಸಿಕೊಂಡಿದ್ದಾರೆ. ಗುರುಗ್ರಾಮ್, ದೆಹಲಿ ಮತ್ತು ರೇವಾರಿಗಳಲ್ಲಿ ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ ೧೦೦ ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಗುಜ್ಜರ್ ಬಂಧನಕ್ಕೆ ೭.೬೦ ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು.
ಕಳೆದ ಹಲವು ತಿಂಗಳುಗಳಿಂದ ಗುಜ್ಜರ್ ಮೇಲೆ ನಿಗಾ ವಹಿಸಿದ್ದು ಆತ ಅಡಗುತಾಣಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದ.
ಚೆನ್ನೈ, ರಾಜಸ್ಥಾನದ ಅಲ್ವಾರ್, ಬಿಹಾರದ ಪಾಟ್ನಾ ಮತ್ತು ವಿಶಾಖಪಟ್ಟಣಂನಲ್ಲಿ ಬಂಧಿಸುವ ಕಾರ್ಯಾಚರಣೆ ವಿಫಲಾಗಿತ್ತು. ಗುಜ್ಜರ್ ಗೋವಾದಿಂದ ಆಗಮಿಸಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮಾಹಿತಿ ಆಧರಿಸಿ ಬಂಧಿಸಲಾಯಿತು ಎಂದು ಬಾಲನ್ ಹೇಳಿದರು.