ದರೋಡೆಕೋರರ ಬಂಧಿಸುವಲ್ಲಿ ಯಶಸ್ವಿ ಎಸ್‌ಪಿ ಶ್ಲಾಘನೆ

????????????????????????????????????

ಮಾನ್ವಿ.ನ.೨೦-ಕಳೆದ ರಾತ್ರಿ ೭.ಗಂ. ಸಮಯದಲ್ಲಿ ಮಾನ್ವಿ ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ವಾಹನ ತಡೆದು ಕಾರಿನಲ್ಲಿದ್ದವರಿಗೆ ಚಾಕು ತೋರಿಸಿ ಬಂಗಾರದ ಒಡವೆ ಹಾಗೂ ಹಣ ದೋಚಿಕೊಂಡು ಪರಾರಿಯಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಮಾನ್ವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಸಂಜೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಿಂ ಅವರು ನ.೧೮ ರಂದು ರಾತ್ರಿ ೭.ಗಂ ಸಮಯದಲ್ಲಿ ಸಿರುಗುಪ್ಪದಿಂದ ಮಾನ್ವಿ ಮೂಲಕ ರಾಯಚೂರು ಕಡೆಗೆ ಮಾರುತಿ ಒಮನಿ ವಾಹನದಲ್ಲಿ ಹೊರಟಿದ್ದ ಲಕ್ಷ್ಮೀದೇವಿ ಮಂಜುನಾಥಸ್ವಾಮಿ ಕುಟುಂಬದವರು ಈ ವೇಳೆ ಏಕಾಏಕಿ ರಾಜ್ಯ ಹೆದ್ದಾರಿ ಬಳಿ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಕಾರುನಲ್ಲಿದ್ದವರಿಗೆ ಮಾರಾಕಾಸ್ತ್ರ ತೋರಿಸಿ ೧೨೫ ಗ್ರಾಂ ಬಂಗಾರ (೫.ಲಕ್ಷ ಮೌಲ್ಯ) ಹಾಗೂ ೨೦ ಸಾವಿರ ರೂ. ಹಣ ಮತ್ತು ೧೫ ಸಾವಿರ ಮೌಲ್ಯದ ಮೊಬೈಲ್‌ನ್ನು ದೋಚಿ ಪರಾರಿಯಾಗಿದ್ದರು.
೭.೧೫ ರ ಸಮಯದಲ್ಲಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೀದೇವಿ ನೀಡಿದ ದೂರನ್ನು ಆಧರಿಸಿ ಎಸ್.ಪಿ. ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‌ಐಗಳಾದ ಸಿದ್ರಾಮ ಬಿದರಾಣಿ, ಸುಜಾತ ಸಿರವಾರ, ವೆಂಕಟೇಶ ಕವಿತಾಳ ನೇತೃತ್ವದ ಎಸ್‌ಐ ವೀರನಗೌಡ, ಸಿಬ್ಬಂದಿಗಳಾದ ರಾಮಪ್ಪ, ರಮೇಶ, ಹುಸೇನ್‌ಸಾಬ್, ಗೋವಿಂದರಾಜ್, ಅಪ್ಜಲ್‌ಪಾಷ, ಚಾಂದ್‌ಪಾಷ, ಡೇವಿಡ್, ದೇವರಾಜ್, ಪ್ರಕಾಶ, ಚರಣ್‌ರಾಜ್, ಶಾಂತಕುಮಾರ, ಅಜಿಮ್‌ಪಾಷ, ಡಾಕಪ್ಪ, ಗಂಗಪ್ಪ ಪೊಲೀಸ್ ತಂಡವು ೧೬ ಗಂಟೆಯೂಳಗೆ ದರೋಡೆಕೋರರನ್ನು ಬಂಧಿಸುವಲ್ಲಿ ಮಾನ್ವಿ ಯಶಸ್ವಿಯಾಗಿದ್ದಾರೆ. ಈ ದರೋಡೆ ಕೃತ್ಯದಲ್ಲಿ ಚಾಲಕ ಗುರುರಾಜ ರಾಯಚೂರು ಕೈವಾಡದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ, ಹುಸೇನ್‌ಸಾಬ್ ಚಾಕಚಕ್ಯತೆಯಿಂದ ಮೊಬೈಲ್‌ನಲ್ಲಿದ್ದ ಸಂದೇಶಗಳ ಜಾಡು ಹಿಡಿದು ಕಾರ್ಯಪ್ರವೃತ್ತರಾಗಿ ದರೋಡೆಕೋರರನ್ನು ಬಂಧಿಸಲಾಗಿದೆ ಎಂದರು.
ಚಾಲಕ ಗುರುರಾಜ ನೀಡಿದ ಸಂದೇಶದ ಸುಳಿವಿನ ಮೇರೆಗೆ ರಾಜ್ಯ ಹೆದ್ದಾರಿ ದರೋಡೆಗೆ ಸಹಕರಿಸಿದ್ದು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶೇಖ್ ಅಬ್ದುಲ್ಲಾ ಮುಜಾಹಿದ್, ಗುರುಕುಮಾರ, ಸೈಯದ್ ಹಕೀಬ್ ಹುಸೇನ್, ಅಸ್ಲಂಪಾಷ ಇವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ರಾಯಚೂರು ನಗರದ ನಿವಾಸಿಗಳಾಗಿದ್ದಾರೆ. ಬಂಧಿತರ ಪೈಕಿ ಗುರುಕುಮಾರ ೩೦೭ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದವರು ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನವುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರಕಾಶ ನಿಕ್ಕಿಂ ಹೇಳಿದರು.
ಬಹುಮಾನ ಃ ರಾಜ್ಯ ಹೆದ್ದಾರಿ ದರೋಡೆಕೋರರನ್ನು ೧೬ ಗಂಟೆಯೂಳಗೆ ಬಂಧಿಸುವಲ್ಲಿ ಯಶಸ್ವಿಗೊಂಡಿರುವ ಸಿಪಿಐ,ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ ಎಸ್.ಪಿ.ಪ್ರಕಾಶ ನಿಕ್ಕಿಂ ಅವರು ಕಳ್ಳರನ್ನು ಬಂಧಿಸುವಲ್ಲಿ ಜಾಣ್ಮೆ ಮೆರೆದ ಪೇದೆಗಳಾದ ರಾಮಪ್ಪ, ಹುಸೇನ್‌ಸಾಬ್ ಇವರಿಗೆ ಬಹುಮಾನ ನೀಡಿ ಅಭಿನಂದಿಸಿದರು.
ಈ ವೇಳೆ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‌ಐಗಳಾದ ಸಿದ್ರಾಮ ಬಿದರಾಣಿ, ಸುಜಾತ ಸಿರವಾರ, ವೆಂಕಟೇಶ ಕವಿತಾಳ, ಎಸ್‌ಐ ವೀರನಗೌಡ, ಸಿಬ್ಬಂದಿಗಳಾದ ರಾಮಪ್ಪ, ರಮೇಶ, ಹುಸೇನ್‌ಸಾಬ್, ಗೋವಿಂದರಾಜ್, ಅಪ್ಜಲ್‌ಪಾಷ, ಚಾಂದ್‌ಪಾಷ, ನರಸಿಂಹ, ಮುಕ್ತಿಯಾರ್, ಡೇವಿಡ್, ದೇವರಾಜ್, ಪ್ರಕಾಶ, ಚರಣ್‌ರಾಜ್, ಶಾಂತಕುಮಾರ, ಅಜಿಮ್‌ಪಾಷ, ಡಾಕಪ್ಪ, ಗಂಗಪ್ಪ ಇದ್ದರು.