ದರೋಡೆಕೋರರ ಬಂಧನ:1.5 ಲಕ್ಷ ಮೌಲ್ಯದ ಆಭರಣ ವಶ

ಕಲಬುರಗಿ,ಮಾ 5: ನಗರದ ಪಶು ಆಸ್ಪತ್ರೆ ಹತ್ತಿರ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಚಿನ್ನದ ಚೈನು ಸುಲಿಗೆ ಮಾಡಿದ ನಾಲ್ವರು ದರೋಡೆಕೋರರನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1.5 ಲಕ್ಷ ರೂ ಮೌಲ್ಯದ ಬಂಗಾರದ ಚೈನು ಮತ್ತು ಕೃತ್ಯಕ್ಕೆ ಬಳಸಿದ 14 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ.
ಉದಯಕುಮಾರ ತಿಪ್ಪಣ್ಣ ದೊಡ್ಡಮನಿ ( 29), ಲೋಕೇಶ ಸುಭಾಷ ಶಿಂಧೆ ( 23),ಅಭಿಷೇಕ ಅಲಿಯಾಸ್ ಪೋಗೋ ಹುಣಚಪ್ಪ ಪೂಜಾರಿ ( 20) ಮತ್ತು ದರ್ಶನ ಗಿರೆಪ್ಪ ಶಿಂಗೆ ( 19) ಬಂಧಿತ ಆರೋಪಿಗಳು.ಈ ನಾಲ್ವರು ನಗರದಲ್ಲಿ ಸೋಮಶೇಖರ ಪಾಟೀಲ ಎಂಬುವವರ ಮೇಲೆ ಹಲ್ಲೆ ಮಾಡಿ, 30 ಗ್ರಾಮ್ ಚಿನ್ನದ ಚೈನ್ ಸುಲಿಗೆ ಮಾಡಿದ್ದರು.
ಕಾರ್ಯಾಚರಣೆಯಲ್ಲಿ ಬ್ರಹ್ಮಪುರ ಠಾಣೆಯ ಪಿಐ ಘಾಳಪ್ಪ ಪೆನಾಗ ನೇತೃತ್ವದಲ್ಲಿ ಪಿ ಎಸ್ ಐ ಶಾಮಸುಂದರ ಸಿಬ್ಬಂದಿಗಳಾದ ಶಿವಪ್ರಕಾಶ,ಕೇಸುರಾಯ,ವಿಶ್ವನಾಥ,ರಾಮು ಪವಾರ,ಶಶಿಕಾಂತ,ನವೀನ್ ಕುಮಾರ,ಶಿವಶರಣಪ್ಪ,ಚನ್ನವೀರ ಅವರನ್ನು ಒಳಗೊಂಡ ತಂಡವು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಪೊಲೀಸ್ ಆಯುಕ್ತ ಚೇತನ್ ಆರ್ ಅವರು ತಂಡವನ್ನು ಪ್ರಶಂಸಿಸಿದ್ದಾರೆ.