ದಯೆ, ಕರುಣೆಗಳೆ ಶುಶ್ರೂಷಕರ ಆಸ್ತಿ : ಬಸವರಾಜ ಜಾಬಶೆಟ್ಟಿ

ಬೀದರ:ಎ.28:ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ದಯೆ, ಕರುಣೆಗಳೇ ಶುಶ್ರೂಷಕರ ಬಹುದೊಡ್ಡ ಆಸ್ತಿ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಬಸವರಾಜ ಜಾಬಶೆಟ್ಟಿ ನುಡಿದರು. ಅವರು ನಗರದ ಕರಾಶಿ ಸಂಸ್ಥೆಯ ಶ್ರೀಮತಿ ಸರಸ್ವತಿ ಗುರುಪಾದಪ್ಪಾ ನಾಗಮಾರಪಳ್ಳಿ ಕಾಲೇಜ ಆಫ್ ನರ್ಸಿಂಗ ಮತ್ತು ಮಾ ವಿಶ್ವ ಪಾಲಿನಿ ಸ್ಕೂಲ ಆಫ್ ನರ್ಸಿಂಗ ಕಾಲೇಜು ಆಯೋಜಿಸಿದ ದೀಪ ಬೆಳಗುವ ಮತ್ತು ಪ್ರತಿಜ್ಞಾ ವಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ತರಬೇತಿಯಲ್ಲಿ ಶಿಸ್ತು ಬಧ್ಧವಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು ಅಂದಾಗ ಮುಂದೆ ತಮ್ಮ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ರೋಗಿಗಳೊಂದಿಗೆ ಉತ್ತಮ ಸಂವಾದ ಮಾಡುವ ಮೂಲಕ ರೋಗಿಗಳ ಮನ ಗೆಲ್ಲಬೇಕು. ಅಂದಾಗ ಶುಶ್ರೂಷಕರು ವೈದ್ಯ ಹಾಗು ರೋಗಿಯ ಉತ್ತಮ ಮಧ್ಯವರ್ತಿಯಾಗಲು ಸಾಧ್ಯವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆ ಬೀದರ ನಿರ್ದೇಶಕರಾದ ಡಾ. ಶಿವಕುಮಾರ ಶೆಟಕಾರ ಅವರು ಮಾತನಾಡುತ್ತ ದೀಪವು ಜ್ಞಾನ ಮತ್ತು ಸಹಾನುಭೂತಿಯನ್ನು ಸಂಕೇತಿಸುತ್ತದೆ. ಅದು ನಮ್ಮ ಶುಶ್ರೂಷಕರಲ್ಲಿ ಇರಬೇಕಾದ ಗುಣಗಳೆ ಆಗಿವೆ. ಏಕೆಂದರೆ ಸಾಮಾಜಿಕ ಬದುಕಲ್ಲಿ ಆರೋಗ್ಯವೇ ಮುಖ್ಯವಾಗಿರುವ ಕಾರಣ ಭವಿಷ್ಯದಲ್ಲಿ ಶುಶ್ರೂಷಕರ ಹುದ್ದೆಗೆ ಮಹತ್ವವಿದೆ. ಆದ್ದರಿಂದ ಶುಶ್ರೂಷಕ ವೃತಿ ಆಯ್ಕೆ ಮಾಡಿದಕ್ಕಾಗಿ ಪ್ರಶಂಸಿದರು.

ಗುದಗೆ ಮಲ್ಟಿಸ್ಪೇಷಲಿಟಿ ಆಸ್ಪತ್ರೆ ಅಧ್ಯಕ್ಷರಾದ ಡಾ. ಚಂದ್ರಕಾಂತ ಗುದಗೆ ಅವರು ಮಾತನಾಡುತ್ತ ನರಸಿಂಗ್ ವೃತ್ತಿ ಪ್ರಪಂಚದಾದ್ಯಂತ ಮಹತ್ವ ಪಡೆದಿದ್ದು ನಗರದಲ್ಲಿ ಕರಾಶಿ ಸಂಸ್ಥೆಯ ಶ್ರೀಮತಿ ಸರಸ್ವತಿ ಗುರುಪಾದಪ್ಪಾ ನಾಗಮಾರಪಳ್ಳಿ ಕಾಲೇಜ ಆಫ್ ನರ್ಸಿಂಗ ಒಂದು ಉತ್ತಮ ಕಾಲೇಜಾಗಿದ್ದು ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ತರುವ ಮೂಲಕ ರಾಷ್ಟ್ರೀಯ ಅಭಿವೃದ್ದಿಗೆ ನೆರವಾಗಬೇಕೆಂದು ಕರೆ ನೀಡಿದರು

ಕ.ರಾ.ಶಿ. ಸಂಸ್ಥೆ ಉಪಾಧ್ಯಕ್ಷರಾದ ಬಿ.ಜಿ. ಶೆಟಕಾರÀವರು ಮಾತನಾಡುತ್ತ ಶುಶ್ರೂಷಕರು ತಮ್ಮ ವೃತ್ತಿಯಲ್ಲಿ ಇಡೀ ಜೀವನವನ್ನೇ ಸಮರ್ಪಣೆ ಮಾಡಿ ಪ್ರತಿಯೊಂದು ರೋಗಿಗು ಆರೈಕೆ ಮಾಡಿ ಗುಣಪಡಿಸುವವರು ಅದಕ್ಕೆ ಕೋವಿಡ್-19 ಸಂದರ್ಭದಲ್ಲಿ ಅವರು ಮಾಡಿದ ತ್ಯಾಗ ಹಾಗೂ ಸೇವೆ ಯಾವತ್ತೂ ಸ್ಮರಣೀಯ ಎಂದು ಕರೋನಾ ಕಾಲದ ಘಟನೆಗಳನ್ನು ಸ್ಮರಿಸಿದರು.

ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ 25ನೆಯ ಘಟಿಕೋತ್ಸವ ಸಂದರ್ಭದಲ್ಲಿ ವಿಷಯವಾರು ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

ಕರಾಶಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಿದ್ರಾಮ ಪಾರಾ, ಜಂಟೀಕಾರ್ಯದರ್ಶಿಗಳಾದ ಸತೀಶ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಕಾಂತ ಶೆಟಕಾರ, ಬುಯ್ಯಾ ವೀರಭದ್ರಪ್ಪ, ರವಿ ಹಾಲಹಳ್ಳಿ, ಸಿದ್ರಾಜ ಪಾಟೀಲ, ಶಿವಾನಂದ ಗಾದಗೆ, ಶ್ರೀನಾಥ ನಾಗೂರೆ ಹಾಗೂ ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕಾಶಿನಾಥ ನೌಬಾದೆ ಮೊದಲಾವರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆರಂಭದಲ್ಲಿ ನರಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಂತೋಷ ಸೋಮಾ ಅವರು ವಾರ್ಷಿಕ ವರದಿಯೊಂದಿಗೆ ಪ್ರಾಸ್ತಾವಿಕ ನುಡಿ ನುಡಿದರು.

ಉಪನ್ಯಾಸಕರಾದ ಡಯಾನಾ ಕಾರ್ಯಕ್ರಮ ನಿರೂಪಿಸಿದರೆ ಶ್ವೇತಾ ಪ್ರಾರ್ಥನಾಗೀತೆ ನಡೆಸಿಕೊಟ್ಟರು. ಅಶ್ವಿನಿ

ವಂದಿಸಿದರು