ದಮ್ಮೂರು ಗ್ರಾ.ಪಂ: ಸ್ವಯಂ ಸೇವಕರ ಬೋಧಕರ ತರಬೇತಿ ಕಾರ್ಯಗಾರ


ಸಂಜೆವಾಣಿ ವಾರ್ತೆ
ಕುರುಗೋಡು:ಏ.13: ಸಾಕ್ಷರ ಭಾರತ ಕಾರ್ಯಕ್ರಮದ ಅಂಗವಾಗಿ ಸ್ವಯಂಪ್ರೇರಕರ ಮೂಲಕ ದೇಶವನ್ನು ಸಾಕ್ಷರನ್ನಾಗಿಸುವ ಗುರಿಯನ್ನು ಗ್ರಾ.ಪಂ ಹಂತದಲ್ಲಿ ಹಳ್ಳಿಗಳಲ್ಲಿ ಹೊಂದಲಾಗಿದೆ ಎಂದು ವಯಸ್ಕರ ಶಿಕ್ಷಣ ಅಧಿಕಾರಿ ಶಿವ ಪ್ರಕಾಶ್ ತಿಳಿಸಿದರು.
ಪಟ್ಟಣ ಸಮೀಪದ ದಮ್ಮೂರು ಗ್ರಾಂ.ಪಂ ಸಭಾ ಭವನದಲ್ಲಿ ಜಿಲ್ಲಾ ಶಿಕ್ಷಣ ತರಭೇತಿ ಸಂಸ್ಥೆ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿ ಆಯೋಜಿಸಿದ್ದ ಸಾಕ್ಷರ ಭಾರತ್ ಗ್ರಾ.ಪಂ ಮಟ್ಟದ ಸ್ವಯಂ ಸೇವಕರ ತರಬೇತಿ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಕ್ಷರತಾ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಸಮಿತಿಯ ಮೂಲಕ ಸಾಕ್ಷರತೆ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಕ್ಷರತೆ ಪ್ರಮಾಣದ ಹೆಚ್ಚಳಕ್ಕೆ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.
ಸಂಪಂನ್ಮೂಲ ವ್ಯೆಕ್ತಿ ಶಿವ ಶಂಕರ್ ಅವರು ಸ್ವಯಂ ಸೇವಕ ಭೋದಕ ಭೋದಕಿಯರಿಗೆ ಬಾಳಿಗೆ ಬೆಳಕು ಪ್ರಾಥಮಿಕ ಪಾಠಗಳನ್ನು ಭೋದನ ಮಾರ್ಗ ವಿಧಾನಗಳನ್ನು ತಿಳಿಸಿಕೊಟ್ಟರು
ದಮ್ಮೂರು ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ದಮ್ಮೂರು ಕ್ಲಸ್ಟರ್ ವ್ಯಾಪ್ತಿಯ ಮುಖ್ಯ ಗುರುಗಳಾದ ಹುಸೇನ್ ಅಲಿ , ಇಂದ್ರನಗರ ಮುಖ್ಯ ಗುರುಗಳು ಧನಾಲು, ಧಮ್ಮೂರು ಕ್ಲಸ್ಟರ್ ಸಿ. ಆರ್. ಪಿ ವಿದ್ಯಾವತಿ, ಭೋಧಕ ಭೋದಕಿಯರು, ಆಶಾ ಕಾರ್ಯಕರ್ತರು, ಸ್ವಸಾಯ ಗುಂಪಿನ ಸದಸ್ಯರು ಇತರರು ಇದ್ದರು.