ದಮ್ಮೂರು-,ಕುರುಗೋಡು ಭಕ್ತರಿಂದ ದಾಸೋಹಕ್ಕೆ 400 ಕೆಜಿ ಚೆಟ್ನಿ ನೀಡಿಕೆ


ಸಂಜೆವಾಣಿ ವಾರ್ತೆ
ಕುರುಗೋಡು.ಜ.5  ಇತಿಹಾಸ ಪ್ರಸಿದ್ದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ದಾರ್ಮಿಕ ದತ್ತಿ ಇಲಾಖೆಯ ನೇತೃತ್ವದಲ್ಲಿ ನಿತ್ಯ ಅನ್ನ ದಾಸೋಹ ಹಮ್ಮಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ದಾಸೋಹಕ್ಕಾಗಿ ದಮ್ಮೂರು ಮತ್ತು ಕುರುಗೋಡು ಭಕ್ತರು ಸಹಕಾರ ನೀಡಿ 400ಕೆಜಿ ಹುಣಿಸೆ ಚೆಟ್ನಿಯನ್ನು ನೀಡಿ ಭಕ್ತಿ ಮೆರೆದಿದ್ದಾರೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಿದ್ದಾರ್ದ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಕುರುಗೋಡು ಪಟ್ಟಣದ ಆರಾದ್ಯ ದೈವ ಶ್ರೀ ದೊಡ್ಡ ಬಸವೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ಎಲ್ಲರೂ ಸಹಕಾರ ನೀಡಬೇಕು, ಅಂದಾಗಮಾತ್ರ ದೊಡ್ಡ ಬಸವೇಶ್ವರಸ್ವಾಮಿ ದೇವಸ್ತಾನ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತಿದೆ. ಶ್ರೀದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ನಿತ್ಯ ನಡೆಯುವ ಅನ್ನದಾಸೋಹಕ್ಕಾಗಿ ಕುರುಗೋಡು ಹಾಗು ದಮ್ಮೂರು ಗ್ರಾಮದ ಭಕ್ತರು ವಿಶೇಷವಾಗಿ ನೆರವು ನೀಡಿ ಹುಣಿಸೆ ಕಾಯಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದುರುಬ್ಬಿ 400 ಕೆಜಿ ಚೆಟ್ನಿಯನ್ನು ತಯಾರಿಸಿಕೊಟ್ಟಿದ್ದಾರೆ. ಶ್ರೀದೊಡ್ಡ ಬಸವೇಶ್ವರಸ್ವಾಮಿಯಕೃಪೆ  ಆಭಕ್ತರಮೇಲೆಇರಲಿಎಂದುಹಾರೈಸಿದರು. ಈ ಸಂದರ್ಭದಲ್ಲಿ ಚಾನಾಳು ಆನಂದ, ಸೋಮಶೇಖರಯ್ಯ ಸ್ವಾಮಿ, ಜೀರು ಎರ್ರಿಸ್ವಾಮಿ,  ಬಿ.ಚಂದ್ರಪ್ಪ, ಪ್ರಭುಸ್ವಾಮಿ, ದಮ್ಮೂರು ವೀರಶೇಖರರೆಡ್ಡಿ, ಮಂಜುನಾಥ ಸ್ವಾಮಿ, ಪ್ರಹ್ಲಾದ ಸೇರಿದಂತೆ ಇತರರು ಇದ್ದರು.