ದಮ್ಮೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಸಭೆ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರೇ ನಿಜವಾದ ದಲಿತರು- ಅರ್ಜುನ್

ಕುರುಗೋಡು.ಜ.11: ಇಂದಿನ ಆಧುನಿಕ ಯುಗದಲ್ಲಿ ಆರ್ಥಿಕ ಹಾಗು ಸಮಾಜಿಕವಾಗಿ ಯಾರು ಹಿಂದುಳಿದಿದ್ದಾರೋ ಅವರೇ ನಿಜವಾದ ದಲಿತರು ಎಂದು ದಲಿತಸಂಘರ್ಷ ಸಮಿತಿ [ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ] ಬಳ್ಳಾರಿ ಜಿಲ್ಲಾದ್ಯಕ್ಷ ಅರ್ಜುನ್‍ಹೆಗಡೆ ಅಭಿಮತವ್ಯಕ್ತಪಡಿಸಿದರು.
ಅವರು ಶನಿವಾರ ಸಮೀಪದ ದಮ್ಮೂರು ಗ್ರಾಮದ ಇಂದಿರಾನಗರದಲ್ಲಿ ಡಿಎಸ್‍ಎಸ್ ಕಾರ್ಯಕರ್ತರಿಂದ ಏರ್ಪಡಿಸಲಾಗಿದ್ದ ದಲಿತ ಸಂಘರ್ಷ [ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ] ಸಮಿತಿಯ ಸಭೆಯಲ್ಲಿ ದಮ್ಮುರು ಗ್ರಾಮ ಘಟಕಕ್ಕೆ ಆಯ್ಕೆಯಾದ ನೂತನ ಪದಾದಿಕಾರಿಗಳಿಗೆ ಆದೇಶಪತ್ರನೀಡಿ ಮಾತನಾಡಿದ ಅವರು, ದಲಿತ ಸಂಘಟನೆ ಕಾರ್ಯಕರ್ತರು, ಮೇಲ್ಜಾತಿಯ ಮುಖಂಡರ ವಿಶ್ವಾಸಪಡೆದು ಎಲ್ಲಾ ವರ್ಗದ ಜನರು ಅಭಿವ್ರುದ್ದಿಹೊಂದಬೇಕೆಂಬುದೇ ನಮ್ಮ ಸಂಘಟನೆಯ ಉದ್ದೇಶ ಎಂದರು. ದಾದಾಸಾಹೇಬ್‍ಎನ್.ಮೂರ್ತಿ ಸ್ಥಾಪಿತ ಈ ಡಿಎಸ್‍ಎಸ್ ಸಂಘಟನೆ ಬೆಳವಣಿಗೆಗೆ ಎಲ್ಲರೂ ಸಹಕಾರನೀಡಬೇಕೆಂದು ಮನವಿ ಮಾಡಿದರು.
ಡಿಎಸ್‍ಎಸ್ ಸಂಘಟನೆಯ ಗುಲ್ಬರ್ಗಾವಿಭಾಗದ ಉಪಾದ್ಯಕ್ಷ ದಾನಪ್ಪಗುತ್ತೇವಾರ್ ಮಾತನಾಡಿ, ದಮ್ಮೂರು ಗ್ರಾಮದ ಇಂದಿರಾನಗರದಲ್ಲಿ ನೂತನವಾಗಿ ಆಯ್ಕೆಯಾದ ಪದಾದಿಕಾರಿಗಳು ಒಕ್ಕಟ್ಟಿನಿಂದ ಸಂಘಟನೆ ಬೆಳೆವಣಿಗೆಗೆ ಹೋರಾಟಮಾಡಬೇಕು ಎಂದರು. ಕೆಪಿಸಿಸಿ ಪ್ರದಾನಕಾರ್ಯದರ್ಶಿ ರಘರಾಮಕ್ರುಷ್ಣ, ಹೈ-ಕ ವಿಭಾಗದ ಕಾರ್ಮಿಕವಿಭಾಗದ ಅದ್ಯಕ್ಷ ಮುಕ್ಕಣ್ಣ, ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ವಿಜಯಲಕ್ಷಿ, ತಾಲೂಕುಅದ್ಯಕ್ಷೆ ಹೆಚ್.ಯಂಕಮ್ಮ, ಜಿಲ್ಲಾ ಪ್ರದಾನಕಾರ್ಯದರ್ಶಿ ಶ್ರೀನಿವಾಸಭಂಡಾರಿ, ನಗರಾದ್ಯಕ್ಷ ಪ್ರಕಾಶ್, ಕುರುಗೋಡು ತಾಲೂಕು ಅದ್ಯಕ್ಷ ಹೆಚ್.ಈಶ್ವರ, ತಾಲೂಕು ಉಪಾದ್ಯಕ್ಷ ಅಂಬಣ್ಣ ಸೇರಿದಂತೆ ಇತರರು ಇದ್ದರು.
ಪದಾದಿಕಾರಿಗಳ ಆಯ್ಕೆ; ಡಿಎಸ್‍ಎಸ್. ದಮ್ಮೂರು ಗ್ರಾಮಘಟಕದ ಅದ್ಯಕ್ಷ- ವೆಂಕಪ್ಪ, ಗೌರವಾದ್ಯಕ್ಷ- ಮಾರೆಪ್ಪ, ಉಪಾದ್ಯಕ್ಷ- ದ್ಯಾವಣ್ಣ, ನಾಗಪ್ಪ, ಪ್ರ.ಕಾರ್ಯದರ್ಶಿ-ಮಲ್ಲಯ್ಯ, ಖಜಾಂಚಿ-ಮಂಜು, ಸಹಕಾರ್ಯದರ್ಶಿ-ದೇವರಾಜ್, ವೆಂಕಟೇಶ್, ಸಂಘಟನಾಕಾರ್ಯದರ್ಶಿ- ಶಂಕರ, ದ್ಯಾವಣ್ಣ,ಶ್ರೀಕಾಂತ್, ರವೀಂದ್ರ, ಸದಸ್ಯ-ವೀರೆಶ್, ರಾಜ, ಶ್ರೀರಾಮ, ಎಕೆ.ಗಂಗಣ್ಣ, ಪರುಶುರಾಮ ಅವರನ್ನು ಆಯ್ಕೆಮಾಡಲಾಯಿತು.