ದಮ್ಮೂರಲ್ಲಿ ಆರೋಗ್ಯ ಜಾಗೃತಿಯಬೀದಿ ನಾಟಕ ಪ್ರದರ್ಶನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.06: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ,  ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ನಡೆಯುತ್ತಿದೆ.
ನಿನ್ನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗಸಂಸ್ಥೆ ನಾಟಕ ತಂಡ  ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಸುಂಕ್ಲಮ್ಮ  ದೇವಸ್ಥಾನದ ಆವರಣದಲ್ಲಿ. ತಂಬಾಕು ಮುಕ್ತ ಭಾರತ ಎನ್ನುವ ಕಾರ್ಯಕ್ರಮದಡಿಯಲ್ಲಿ
ಬೀದಿ ನಾಟಕವನ್ನು 
ಶಾಲೆಯ ಮಕ್ಕಳು, ಊರಿನ ಜನತೆ,  ಆರೋಗ್ಯ  ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರದರ್ಶನ ಮಾಡಿದರು. 
ತಂಬಾಕು ಮನುಷ್ಯನ ಜೀವನವನ್ನು ಬದುಕನ್ನು ದೇಹವನ್ನು ಹೇಗೆಲ್ಲ ನಾಶ ಮಾಡುತ್ತದೆ. ಅದರಿಂದ ದೂರವಿರಲು ನಾವೇನು ಮಾಡಬೇಕು ಎಂಬುದರ ಕುರಿತು.  ಬೀದಿ ನಾಟಕದ ಮೂಲಕ  ಜನರಿಗೆ ಜಾಗೃತಿಯನ್ನು ಮೂಡಿಸಿದರು.